ಅಂಕೋಲಾದ ಹಾರವಾಡ ಭಾಗದಲ್ಲಿ ಹೋರಿಯೊಂದು ಅಡ್ಡಾದಿಡ್ಡಿ ಅಲೆದಾಡುತ್ತಿದ್ದು, ಕಂಡ ಕಂಡವರನ್ನು ತಿವಿಯುತ್ತಿದೆ. ಈ ಹೋರಿ ರೇಬಿಸ್ ರೊಗಕ್ಕೆ ಒಳಗಾಗಿದ್ದು, ಅದಕ್ಕೆ ಮೂಗುದಾರ ಹಾಕಿ ಸಮಾಧಾನ ಮಾಡುವುದು ಸವಾಲಾಗಿದೆ.
ಸೈರೋಬಾ ಪೇಟೆ ಎಂಬಾತರು ಹೋರಿ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಶು ವೈದ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹೋರಿಯನ್ನು ಹಗ್ಗದಿಂದ ಸೆರೆ ಹಿಡಿದಿದ್ದು, ಚುಚ್ಚುಮದ್ದು ನೀಡಿದ್ದಾರೆ. ಆದರೆ, ರೋಗ ಲಕ್ಷಣ ಕಡಿಮೆಯಾಗಿಲ್ಲ. ಹೋರಿ ಮತ್ತೊಂದು ಹಸುವಿಗೂ ತಿವಿದಿದ್ದು, ಆ ಹಸುವಿನ ಬಗ್ಗೆ ನಿಗಾವಹಿಸಲಾಗಿದೆ.
ಇನ್ನೂ, ಈ ಭಾಗದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ರೇಬಿಸ್ ರೋಗಕ್ಕೆ ಒಳಗಾದ ನಾಯಿ ಇನ್ನಿತರ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದೆ. ಹೋರಿಗೂ ನಾಯಿ ಕಚ್ಚಿದ ಪರಿಣಾಮ ರೇಬಿಸ್ ರೋಗ ಹರಡಿದೆ. ಕಂಡ ಕಂಡಲ್ಲಿ ಕುಣಿಯುವ ಹೋರಿಗೆ ಇದೀಗ ಹಗ್ಗ ಬಿಗಿಯಲಾಗಿದ್ದು, ರೋಗಗ್ರಸ್ಥ ನಾಯಿಗಳ ಕಾಟದಿಂದ ಜನರಿಗೆ ನೆಮ್ಮದಿ ಸಿಕ್ಕಿಲ್ಲ.
Discussion about this post