ಮುಂಡಗೋಡಿನ ಮಳಗಿಯಲ್ಲಿರುವ ಧರ್ಮಾ ಜಲಾಶಯ ಭರ್ತಿಯಾದ ಕಾರಣ ಹಾವೇರಿಯ ಜನ ಸಂತಸದಲ್ಲಿದ್ದಾರೆ. ಹಾನಗಲ್ ಭಾಗದಿಂದ ನಿತ್ಯವೂ ತಂಡೋಪತoಡವಾಗಿ ಜನ ಆಗಮಿಸಿ ನೀರು ನೋಡುತ್ತಿದ್ದಾರೆ.
ಧರ್ಮಾ ಜಲಾಶಯ ಭರ್ತಿಯಾಗಿ ಕೋಡಿ ಹರಿಯುತ್ತಿರುವುದರಿಂದ ರೈತರ ಸಂತಸ ಹೆಚ್ಚಾಗಿದೆ. ಜೊತೆಗೆ ಪ್ರವಾಸಿಗರು ಸಹ ಇಲ್ಲಿ ಬರುತ್ತಿದ್ದಾರೆ. ಜಲಾಶಯದ ಸೊಬಗನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದು ಮರಳುತ್ತಿದ್ದಾರೆ.
ಧರ್ಮಾ ಜಲಾಶಯ ಭರ್ತಿಯಾಗಿದೆ ಎಂಬ ಸುದ್ದಿಯಿಂದ ಹಾನಗಲ್ ತಾಲೂಕಿನ ಜನ ಸಂತಸವ್ಯಕ್ತಪಡಿಸಿದ್ದಾರೆ. ಧರ್ಮಾ ಜಲಾಶಯದ ನೀರು ಮುಂಡಗೋಡ ತಾಲೂಕಿನ ರೈತರಿಗಿಂತ ಹಾನಗಲ್ ತಾಲೂಕಿನ ರೈತರಿಗೆ ಅಧಿಕ ಉಪಯೋಗವಾಗಿದ್ದು, ಅಲ್ಲಿನವರು ಆಗಮಿಸಿ ನೀರು ನೋಡುತ್ತಿದ್ದಾರೆ.
ಕಳೆದ ಮೂರು ವರ್ಷದಿಂದ ಜಲಾಶಯ ಭರ್ತಿಯಾಗಿ ಕೋಡಿ ಬೀಳುತ್ತಿದೆ. ಈ ನೀರು ನಂಬಿ ಹಾನಗಲ್ ಭಾಗದವರು ಕೃಷಿ ಕಾಯಕ ಮಾಡಿಕೊಂಡಿದ್ದಾರೆ. ಪ್ರತಿ ವರ್ಷ ಮುಂಡಗೋಡಿಗೆ ಬಂದು ಜಲಾಶಯಕ್ಕೆ ಪೂಜೆ ಸಲ್ಲಿಸುವ ಭಕ್ತರಿದ್ದು, ಅವರ ಆಗಮನದಿಂದ ಸ್ಥಳೀಯರು ಹರ್ಷಗೊಂಡಿದ್ದಾರೆ.
Discussion about this post