ಅಂಗವಿಕಲ ಮಹಿಳೆಯೊಬ್ಬರಿಗೆ ಆಸರೆಯಾಗುವುದಕ್ಕಾಗಿ ಸರ್ಕಾರ ಕಾಲು ಸಂಕವೊoದನ್ನು ನಿರ್ಮಿಸಿದೆ. ಆದರೆ, ಐದು ವರ್ಷ ಕಳೆದರೂ ಆ ಕಾಲು ಸಂಕ ಪೂರ್ಣವಾಗದೇ ಅಂಗವೈಕಲ್ಯತೆಯಿoದ ಬಳಲುತ್ತಿದೆ!
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಯಾಣದ ಬಳಿ ವಾಸಿಸುವ ದೇವಕಿ ಮರಾಠಿ ಅವರು ಅಂಗವೈಕಲ್ಯದಿoದ ಬಳಲುತ್ತಿದ್ದಾರೆ. ಸಾಕಷ್ಟು ಮನವಿ ನಂತರ ಅಲ್ಲಿನ ಚೆಂಡಿಕಾ ನದಿಗೆ ಸರ್ಕಾರ ಸೇತುವೆ ಭಾಗ್ಯ ನೀಡಿದೆ. ಆದರೆ, ಸೇತುವೆಯ ಎರಡು ಕಡೆ ಪಿಚ್ಚಿಂಗ್ ಮಾಡಿಲ್ಲ. ಆ ಭಾಗಕ್ಕೆ ಅಗತ್ಯವಿರುವ ಮಣ್ಣು ತುಂಬಿಲ್ಲ. ಪುಟ್ಟ ನದಿ ನಡುವೆ ಮಾತ್ರ ಸಿಮೆಂಟ್ ಸೇತುವೆ ಕಟ್ಟಲಾಗಿದ್ದು, ಎರಡು ಕಡೆ ಅಡಿಕೆ ಮುಂಡಿ ಬಳಸಿ ಸಾಹಸ ನಡೆಸುವುದು ಅನಿವಾರ್ಯವಾಗಿದೆ.
ದಟ್ಟ ಕಾಡಿನಲ್ಲಿ ದೇವಕಿ ಮರಾಠಿ ಅವರು ಒಂಟಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿ ವರ್ಷ ಅಡಿಕೆ ದಬ್ಬೆ ಬಳಸಿ ಅವರು ಸೇತುವೆ ಮೇಲೆ ಸರ್ಕಸ್ ಮಾಡುತ್ತಾರೆ. ಭಾರೀ ಪ್ರಮಾಣದ ಮಳೆ ಬಂದಾಗ ಅಡಿಕೆ ಮುಂಡಿ ಸಹ ನೀರಿನಲ್ಲಿ ಕೊಚ್ಚು ಹೋಗುವ ಸಾಧ್ಯತೆಯಿದ್ದು, ಆ ವರ್ಷ ಮತ್ತೊಮ್ಮೆ ಅಡಿಕೆ ಮರ ಕಡಿಯುವುದಕ್ಕಾಗಿ ದೇವಕಿಯವರು ಸಾಹಸ ನಡೆಸುತ್ತಾರೆ.
ದೇವಕಿಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರಬೇಕು ಎಂದರೆ ಇದೇ ಸೇತುವೆ ಗತಿ. ಅವರೊಂದಿಗೆ ಮತ್ತೆ ಮೂರು ಮನೆಯವರಿಗೂ ಈ ಸೇತುವೆಯೇ ಆಧಾರ. ದೇಹದ ಬಲಭಾಗದ ನ್ಯೂನ್ಯತೆಯಿಂದ ಬಳಲುತ್ತಿರುವ ದೇವಕಿ ಮರಾಠಿ ಅವರು ಸೇತುವೆಯ ಎರಡು ಕಡೆ ಮಣ್ಣು ತುಂಬುವAತೆ ಅರ್ಜಿ ಹಿಡಿದು ಅಲೆದಾಡುತ್ತಿದ್ದಾರೆ. ಆದರೆ, ಗುತ್ತಿಗೆ ಕೆಲಸ ನಿರ್ವಹಿಸಿದವರು ಊರಿನಿಂದ ನಾಪತ್ತೆ ಆಗಿದ್ದಾರೆ. ದೇವಕಿ ಅವರ ಅಳಲಿನ ಅರ್ಜಿ ಸರ್ಕಾರವನ್ನು ತಲುಪುತ್ತಿಲ್ಲ. ಅಲ್ಲಿನ ಕೆಲಸವೂ ಆಗುತ್ತಿಲ್ಲ.
Discussion about this post