ಅಂಕೋಲಾ: ಮೊರಳ್ಳಿ ಹೊನ್ನುತೇರುವಿನ ಸುರೇಶ ನಾಯಕ ಅವರ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ನಾಗರಾಜ ತಿಮ್ಮಣ್ಣ ಗೌಡ (37) ಉಳುಮೆಗೆ ಬಳಸಿದ ಟಾಕ್ಟರಿಗೆ ಸಿಲುಕಿ ಸಾವನಪ್ಪಿದ್ದಾರೆ.
ಮೊರಳ್ಳಿ ಮಾಣಿಗುಡ್ಡೆಯ ನಾಗರಾಜ ಗೌಡ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಯಾರೂ ಕರೆದರೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಬೇರೆಯವರ ತೋಟ-ಗದ್ದೆಯಲ್ಲಿ ಕೆಲಸ ಮಾಡಿ ಅವರು ಜೀವನ ನಡೆಸುತ್ತಿದ್ದರು. ಅದರಂತೆ ಅಗಸ್ಟ್ 2ರಂದು ಮಧ್ಯಾಹ್ನ ಸುರೇಶ ನಾಯಕರ ಗದ್ದೆಯಲ್ಲಿ ಟಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದರು. ಮಧ್ಯಾಹ್ನ 3.45ರ ವೇಳೆಗೆ ಆಕಸ್ಮಿಕವಾಗಿ ಅವರ ಕಾಲು ಟಾಕ್ಟರ್ ಕೆಳಗೆ ಹೋಗಿದ್ದು, ಉಳುಮೆ ಯಂತ್ರದ ಹಲ್ಲಿಗೆ ಸಿಲುಕಿ ತೊಡೆಗೆ ಗಾಯವಾಗಿತ್ತು. ತಕ್ಷಣ ಆರೈಕೆ ಮಾಡುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಕೊಡುವುದರ ಒಳಗೆ ಅವರು ಸಾವನಪ್ಪಿದ್ದಾರೆ.