
ಮುಂಡಗೋಡು: ಟಾಟಾಎಸ್ಸಿ ವಾಹನ ಗುದ್ದಿದ ಪರಿಣಾಮ ಹನುಮಾಪುರದ ಕಿರಣ ವಡ್ಡರ್ (24) ಗಾಯಗೊಂಡಿದ್ದಾರೆ.
ಹನುಮಾಪುರದಿoದ ಕಾತೂರು ಕಡೆ ಟಾಟಾಎಸ್ಸಿ ವಾಹನ ಓಡಿಸಿಕೊಂಡು ಹೋಗುತ್ತಿದ್ದ ಹಾವೇರಿಯ ಬಸವರಾಜ ಕತ್ತಿ ಎಂಬಾತ ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ಕಿರಣ ವಡ್ಡರ್\’ಗೆ ಗುದ್ದಿದ್ದು, ಬೈಕ್ಸಹಿತ ನೆಲಕ್ಕೆ ಬಿದ್ದ ಕಿರಣ್ ತಲೆ ಹಾಗೂ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಬಲಗಾಲಿನಿಂದ ಭಾರೀ ಪ್ರಮಾಣದ ರಕ್ತ ಚಿಮ್ಮಿದೆ. ಅಪಘಾತಕ್ಕೆ ಕಾರಣನಾದ ಬಸವರಾಜನ ವಿರುದ್ಧ ಕಿರಣನ ಪತ್ನಿ ಚಂದನ ಪೊಲೀಸ್ ದೂರು ನೀಡಿದ್ದಾರೆ.