ಮುಂಡಗೋಡ: `ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಶಿಸ್ತು ಹಾಗೂ ದೇಶಪ್ರೇಮ ಕಲಿಸಬೇಕು. ಇದಕ್ಕೆ ಸೇವಾದಳ ಸಹಕಾರಿ\’ ಎಂದು ಮಾಜಿ ಶಾಸಕ ವಿ ಎಸ್ ಪಾಟೀಲ ಹೇಳಿದರು.
ಶನಿವಾರ ಭಾರತ ಸೇವಾದಳದ ಶಿಕ್ಷಕ – ಶಿಕ್ಷಕಿಯರ ಪುನಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು `ಪ್ರತಿಯೊಬ್ಬರಿಗೂ ಜೀವನದಲ್ಲಿ ಶಿಸ್ತು ಅಗತ್ಯ. ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವುದರ ಜೊತೆಗೆ ದೇಶಪ್ರೇಮದ ಬಗ್ಗೆಯೂ ಶಿಕ್ಷಕರು ಕಲಿಸಬೇಕು. ಸೇವಾದಳದ ಸೇವೆ ಎಲ್ಲರಿಗೂ ಮಾದರಿ\’ ಎಂದು ಹೇಳಿದರು.
ಕೆ.ಎನ್.ಹೊಸಮನಿ ಉಪನ್ಯಾಸ ನೀಡಿ `ಶಿಕ್ಷಕರು ಶ್ರದ್ಧೆ, ಭಕ್ತಿಯಿಂದ ಕೆಲಸ ಮಾಡಬೇಕು\’ ಎಂದರು. ಭಾರತ ಸೇವಾದಳದ ತಾಲೂಕ ಘಟಕದ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಲ್.ಟಿ.ಪಾಟೀಲ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಜಿ.ಎನ್.ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ವಿಜಯಕುಮಾರ್ ಶೆಟ್ಟಿ, ಮುಖಂಡರಾದ ಜ್ಞಾನೇಶ್ವರ ಗುಡಿಯಾಳ, ಭಾರತ ಸೇವಾದಳದ ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ, ತಾಲೂಕಾ ಸಂಘಟಕ ಎನ್.ಎಸ್.ಹೆಗಡೆ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ದಯಾನಂದ ನಾಯ್ಕ, ಪ್ರದೀಪ್ ಕುಲಕರ್ಣಿ, ಮಂಜುನಾಥ ಕಲಾಲ, ವಿನಾಯಕ ಶೇಟ, ಸಿ.ಕೆ.ಅಶೋಕ, ಶ್ರೀಧರ ಹೆಗಡೆ ಇತರರು ಇದ್ದರು.
ಶಿಕ್ಷಕ ಕೆ.ಕೆ.ಕರುವಿನಕೊಪ್ಪ ಸ್ವಾಗತಿಸಿದರು. ರಾಜೇಂದ್ರ ಗಾಣಿಗ ನಿರ್ವಹಿಸಿದರು.