ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ ಮಾಸದಲ್ಲಿ ವಾಡಿಕೆಗಿಂತ ಶೇ 81ರಷ್ಟು ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಈವರೆಗೆ ಸುರಿದ ಮಳೆಯಿಂದ ಆದ ಹಾನಿಯ ಬಗ್ಗೆ ಈವರೆಗೂ ಖಚಿತ ಅಂದಾಜು ಸಿಗುತ್ತಿಲ್ಲ.
ಮಳೆ ಕಾರಣದಿಂದ ಈವರೆಗೆ 13 ಜನ ಸಾವನಪ್ಪಿದ ಬಗ್ಗೆ ಜಿಲ್ಲಾಡಳಿತಕ್ಕೆ ಲೆಕ್ಕ ಸಿಕ್ಕಿದೆ. ಸಾವನಪ್ಪಿದವರ ಎಲ್ಲಾ ಕುಟುಂಬಕ್ಕೆ ಒಟ್ಟಾರೆ 65 ಲಕ್ಷ ರೂ ಪರಿಹಾರವನ್ನು ಸರ್ಕಾರ ನೀಡಿದೆ. ಈ ವರ್ಷದ ಮಳೆ 211 ಮನೆಗಳನ್ನು ನಾಶ ಮಾಡಿದೆ. 22 ಜಾನುವಾರುಗಳು ಸಾವನಪ್ಪಿದ ಲೆಕ್ಕ ಸಿಕ್ಕಿದೆ. 383 ಹೆಕ್ಟೇರ್ ಕೃಷಿ ಹಾಗೂ 21.51 ಹೆಕ್ಟೇರ್ ತೋಟಗಾರಿಕಾ ಕ್ಷೇತ್ರ ಹಾಳಾಗಿದೆ.
291 ಅಂಗನವಾಡಿ, 556 ಶಾಲೆ, 9 ಆರೋಗ್ಯ ಕೇಂದ್ರ, 114 ಸೇತುವೆ ಹಾಗೂ ಮೋರಿ, 589ಕಿಮೀ ಮುಖ್ಯ ರಸ್ತೆಗಳಿಗೆ ಹಾನಿಯಾಗಿದೆ. ಜಿಲ್ಲಾ ಮುಖ್ಯ ರಸ್ತೆಯ ಹಾನಿ ಬಗ್ಗೆ ಲೆಕ್ಕ ನಡೆಯುತ್ತಿದೆ. ವಿದ್ಯುತ್\’ಗೆ ಸಂಬoಧಿಸಿ ಮಳೆ ಕಾರಣ ಈವರೆಗೆ 4667 ಕಂಬ ಧರೆಗೆ ಉರುಳಿದೆ. 374 ಟಿಸಿ ಹಾಳಾಗಿದೆ. 204.83 ಕಿ,ಮೀ ದೂರದ ವಿದ್ಯುತ್ ತಂತಿಗಳು ಹಾಳಾಗಿದೆ.