ಅಂಕೋಲಾ: ಬಾಳೆಗುಳಿ ತಿರುವಿನಲ್ಲಿ ಕಾಡು ಹಂದಿ ಮಾಂಸ ಹೊತ್ತು ತಿರುಗುತ್ತಿದ್ದ ಸುಂಕಸಾಳದ ಅಕ್ಷಯ ಮಂಜುನಾಥ ಗಾಂವ್ಕರ್ ಎಂಬಾತನನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಶನಿವಾರ ಈತ ಅಲಗೇರಿ ಗ್ರಾಮದಲ್ಲಿ ಕಾಡು ಮಾಂಸದ ಜೊತೆ ಓಡಾಡಿಕೊಂಡಿದ್ದ. ಆತ ಇದ್ದ ಕಾರಿನಲ್ಲಿ ಇನ್ನಷ್ಟು ಮಾಂಸವನ್ನು ಇಟ್ಟುಕೊಂಡಿದ್ದ. ಈ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಬಾಳೆಗುಳಿ ತಿರುವಿನಲ್ಲಿ ಕಾದು ಆತನ ಮೇಲೆ ದಾಳಿ ನಡೆಸಿದರು. ಆಗ ಮಾಂಸದ ಜೊತೆ ಆರೋಪಿ ಸಹ ಸಿಕ್ಕಿಬಿದ್ದಿದ್ದಾನೆ.