ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಟ್ಕಳದ ಸೀಮಾ ಮೋಗೇರ್ ಅಡುಗೆ ಮನೆಗೆ ಹೋದಾಗ ಬೇಸರಗೊಂಡಿದ್ದು, ಅಲ್ಲಿಯೇ ನೇಣು ಹಾಕಿಕೊಂಡಿದ್ದಾರೆ.
ಭಟ್ಕಳದ ಮುಂಡಳ್ಳಿ ಬಳಿಯ ಮೊಗೇರಕೇರಿಯ ಸೀಮಾ ಆಗೇರ್ (28) ಅವರು ಹರೀಶ್ ಆಗೇರ್ ಅವರನ್ನು ವರಿಸಿದ್ದರು. ಖಾಸಗಿ ಕಂಪನಿಯಲ್ಲಿ ಸೀಮಾ ಆಗೇರ್ ಅವರು ಕೆಲಸ ಮಾಡುತ್ತಿದ್ದರು. ಜೀವನದಲ್ಲಿ ನೊಂದಿದ್ದ ಅವರು ಬದುಕಿನ ಬಗ್ಗೆ ಜಿಗುಪ್ಸೆಯಿಂದಿದ್ದರು.
ಜುಲೈ 9ರಂದು ಅಡುಗೆ ಮನೆಗೆ ಹೋದ ಅವರು ಸಾವಿನ ಬಗ್ಗೆ ಯೋಚಿಸಿದರು. ತಕ್ಷಣ ವೇಲನ್ನು ಮೇಲ್ಚಾವಣಿಗೆ ಕಟ್ಟಿ ನೇಣು ಬಿಗಿದುಕೊಂಡರು. ಅಲ್ಲಿಯೇ ಅವರು ಪ್ರಾಣಬಿಟ್ಟಿದ್ದು, ಸೀಮಾ ಅವರ ತಂದೆ ಈಶ್ವರ ಮೊಗೇರ್ ಭಟ್ಕಳ ಗ್ರಾಮೀಣ ಠಾಣೆಗೆ ಸಾವಿನ ಸುದ್ದಿ ಮುಟ್ಟಿಸಿದರು.
