ಅನೇಕ ಬಿಜೆಪಿಗರ ಪಾಲಿಗೆ ರಾಜಕೀಯ ಗುರುವಾಗಿರುವ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನ ಈ ಬಾರಿ ಗುರುಪೂರ್ಣಿಮೆಯ ದಿನವೇ ಬಂದಿದೆ. ಈ ಹಿನ್ನಲೆ ವಿವಿಧ ಕಡೆ ಬಿಜೆಪಿಗರು ವಿಶಿಷ್ಟವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಯಲ್ಲಾಪುರದ ವೃದ್ದಾಶ್ರಮ ಹಾಗೂ ವಿಠ್ಠಲ ವನವಾಸಿ ಹಾಸ್ಟೇಲಿಗೆ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಮುಂದಾಳತ್ವದಲ್ಲಿ ಹಾಸಿಗೆ-ಹೊದಿಕೆ ವಿತರಿಸಲಾಗಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಪ್ಪಟ್ಟ ಅಭಿಮಾನಿ ಗಣಪತಿ ಬೋಳಗುಡ್ಡೆ ಅವರು ಈ ಕಾರ್ಯಕ್ರಮ ಸಂಯೋಜಿಸಿದ್ದು, ಬಿಜೆಪಿ ಪ್ರಮುಖರಾದ ರಾಮು ನಾಯ್ಕ, ಹರಿಪ್ರಕಾಶ ಕೋಣೆಮನೆ ಜೊತೆಗಿದ್ದರು.
ಅದಾದ ನಂತರ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರ ಮುಂದಾಳತ್ವದಲ್ಲಿ ಮಂಚಿಕೇರಿ ಸೀಮೆಗೆ ತೆರೆಳಿದ ಬಿಜೆಪಿಗರು ಗುರುಪೂರ್ಣಿಮೆ ನಿಮಿತ್ತ ವೇದಮೂರ್ತಿ ನಾಗೇಂದ್ರ ಭಟ್ಟ ಹಿತ್ಲಳ್ಳಿ ಮತ್ತು ಹಾಗೂ ವಿದ್ವಾಂಸ ಶರ್ಮಾ ಭಟ್ಟ ಹಿತ್ಲಳ್ಳಿ ಅವರಿಗೆ ಗೌರವಿಸಿದರು. ಆ ಭಾಗದ ಪ್ರಮುಖರಾದ ವಿನೇಶ್ ಭಟ್, ಪ್ರಸನ್ನ ಭಟ್, ನಾಗೇಂದ್ರ ಪತ್ರೆಕರ್, ನಾಗೇಂದ್ರ ಹೆಗಡೆ, ಗೋಪಾಲ್ ಶಾಸ್ತ್ರಿ, ಮಹಾಬಲೇಶ್ವರ ಭಟ್ , ರಾಘು ಭಟ್, ರಾಜೇಶ್ ಉಪ್ಪಾರ್, ಗಣಪತಿ ದೇವಾಡಿಗ, ಆದಿತ್ಯ ಹಿರೇಸರ, ಬಾಲಚಂದ್ರ ಜಾಗ್ನಮನೆ, ಸುಮಂತ ಪತ್ರೆಕರ್, ಶಶಿಕಲಾ ಪತ್ರೆಕರ್ ಈ ಕಾರ್ಯಕ್ರಮ ನಡೆಸಿಕೊಟ್ಟರು.
ಇಡಗುಂದಿಯ ಶ್ರೀರಾಮ ಲಿಂಗೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಮಹಿಳಾ ಮೋರ್ಚಾದವರು ಈ ದಿನ ಗುರು ಅಷ್ಠಕ ಪ್ರಾರ್ಥನೆ ಪಠಿಸಿದರು. ವಿದ್ವಾಂಸ ಮಹಾಭಲೇಶ್ವರ ಶ್ಯಾನೆಪಾಲ ದಂಪತಿಗೆ ಮಹಿಳಾ ಮೋರ್ಚಾ ಪದಾಧಿಕಾರಿಗಳು ಗೌರವಿಸಿದರು. ಪ್ರಮುಖರಾದ ಚಂದ್ರಕಲಾ ಭಟ್ಟ, ಶ್ರುತಿ ಹೆಗಡೆ, ಶ್ಯಾಮಿಲಿ ಪಾಟಣಕರ್ ಜೊತೆ ಪಾರ್ವತಿ ಕೆರೆಗದ್ದೆ, ಪಾರ್ವತಿ ಸಣ್ಣೆ, ನಾಗವೇಣಿ ಭಟ್ಟ ಶ್ಯಾನೇಪಾಲ, ಶ್ಯಾಮಲಾ ಭಟ್ಟ, ಚೈತ್ರಾ ಮಾಹಾಬಲೇಶ್ವರ ಸಣ್ಣೆ, ಪಾರ್ವತಿ ಬಿದ್ರೆ, ವಿದ್ಯಾ ಭಟ್ಟ, ಸುಲೋಚನಾ ಭಟ್ಟ, ನಾಗರತ್ನಾ ಮಣ್ಮನೆ, ವಿದ್ಯಾ ಭಟ್ಟ, ಗೌರಿ ಭಟ್ಟ, ವೀಣಾ ಭಟ್ಟ, ಸೀತಾ ವೆಂಕಟ್ರಮಣ ಭಟ್ಟ ಸೇರಿ ಹಲವು ಮಹಿಳಾ ಪ್ರಮುಖರು ಜೊತೆಗಿದ್ದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಅವರ ಸಾಧನೆಯ ಬಗ್ಗೆ ಬಿಜೆಪಿಗರು ಮಾತನಾಡಿದರು.





Discussion about this post