ಕುಮಟಾ: ಗೋಕರ್ಣ ಬಳಿಯ ಬೆಲೇಖಾನ ಗುಡ್ಡದ ಮೇಲೆ ನಡೆಸುತ್ತಿರುವ ಚಿರೆಕಲ್ಲು ಗಣಿಗಾರಿಕೆಯಿಂದ ಅದರ ತಳಭಾಗದಲ್ಲಿರುವ 10 ಮನೆಗಳಿಗೆ ಅಪಾಯ ಎದುರಾಗಿದೆ. ಹೀಗಾಗಿ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಆ ಭಾಗದ ಜನ ಆಗ್ರಹಿಸಿದ್ದಾರೆ.
ಗಣಿಗಾರಿಕಾ ಪ್ರದೇಶಕ್ಕೆ ತೆರಳಿದ ಸ್ಥಳೀಯರು ಅಲ್ಲಿನ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಮಳೆ ವ್ಯಾಪಕವಾಗಿರುವುದರಿಂದ ಗಣಿ ಪ್ರದೇಶದ ಗುಡ್ಡ ತಳಭಾಗದ ಮನೆಗಳ ಮೇಲೆ ಬೀಳುವ ಅಪಾಯವಿದೆ ಎಂದು ಜನ ವಿವರಿಸಿದರು. ಗಣಿಯ ಮಣ್ಣು ಅಡಿಭಾಗದ ಗದ್ದೆಗಳಿಗೆ ಹರಿದು ಬರುತ್ತಿರುವುದರಿಂದ ಕೃಷಿ ಚಟುವಟಿಕೆಗೂ ಸಮಸ್ಯೆಯಾಗಿದೆ ಎಂದು ದೂರಿದರು. ಗ್ರಾ ಪಂ ಅಧ್ಯಕ್ಷೆ ಹಾಗೂ ಕಂದಾಯ ಅಧಿಕಾರಿಗಳು ಆಗಮಿಸಿ, ಗಣಿಗಾರಿಕೆ ನಡೆಸದಂತೆ ಅಲ್ಲಿನವರಿಗೆ ಸೂಚಿಸಿದರು.