ಕಾರವಾರದ ನಮನ್ ಬೇಕರಿ ಎದುರಿನ ತೆಂಗಿನ ಮರ ಕಟಾವಿಗೆ ಮರ ಏರಿದ್ದ ವ್ಯಕ್ತಿ 40 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದಾರೆ. ಅದಾಗಿಯೂ, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಮನ್ ಬೇಕರಿ ಎದುರು ತೆಂಗಿನ ಮರ ಒಣಗಿತ್ತು. ಹೀಗಾಗಿ ಅದರ ಕಟಾವಿಗೆ ಶುಕ್ರವಾರ ದಿನ ನಿಗದಿಯಾಗಿತ್ತು. ಮರ ಏರಿದ ವ್ಯಕ್ತಿ ಮೇಲ್ಬಾಗ ತುಂಡರಿಸುತ್ತಿರುವಾಗ ಮರವೇ ಮುರಿದು ಬಿದ್ದಿತು.
ಮುರಿದ ಮರ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಆ ಸಮಯಕ್ಕೆ ವಿದ್ಯುತ್ ಪ್ರವಾಹ ಇರಲಿಲ್ಲ. ಹೀಗಾಗಿ ಆ ವ್ಯಕ್ತಿಯ ಜೊತೆ ಅಡಿಗಿದ್ದ ಜನರೆಲ್ಲರೂ ಜೀವ ಉಳಿಸಿಕೊಂಡರು.
ವಿಷಯ ತಿಳಿದ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ನೂರಾರು ಜನ ಅಲ್ಲಿ ಜಮಾಯಿಸಿದರು. ಈ ಅವಘಡದಿಂದ 3 ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ಅದನ್ನು ಹೆಸ್ಕಾಂ ಸಿಬ್ಬಂದಿ ಸರಿಪಡಿಸಿದರು.
