ಶಿರಸಿಯ ಅಡಿಕೆ ವ್ಯಾಪಾರಿ ಸರ್ಪರಾಜ ಹಮೀದ್ ಅವರಿಗೆ ಉತ್ತರ ಪ್ರದೇಶದ ಅಡಿಕೆ ವ್ಯಾಪಾರಿಯೊಬ್ಬರು ಮೋಸ ಮಾಡಿದ್ದಾರೆ. 14 ಲಕ್ಷ ರೂ ವಂಚನೆಯಾದ ಬಗ್ಗೆ ಸರ್ಪರಾಜ ಹಮೀದ್ ಪೊಲೀಸ್ ದೂರು ನೀಡಿದ್ದಾರೆ.
ಸರ್ಪರಾಜ ಹಮೀದ್ ಅವರು ಶಿರಸಿಯ ಕಸ್ತೂರಿಬಾ ನಗರದ ನಿವಾಸಿ. ಪ್ರೆಮ ಟ್ರೇರ್ಸ ಎಂಬ ಅಡಿಕೆ ವಹಿವಾಟು ಮಳಿಗೆ ಹೊಂದಿದ್ದು, ಅದರ ಮೂಲಕ ದೇಶದ ನಾನಾ ಭಾಗಗಳಿಗೆ ಅಡಿಕೆ ರವಾನಿಸುತ್ತಾರೆ. 2023ರಲ್ಲಿ ಉತ್ತರ ಪ್ರದೇಶದಲ್ಲಿ ಆರ್ ಕೆ ಟ್ರೇಡರ್ಸ’ನ ಸಂಶಾದ ಅಹ್ಮದ್ ಅವರು ಸರ್ಪರಾಜ ಅವರಿಗೆ ಪರಿಚತರಾದರು.
2023ರ ಜನವರಿ 26ರಿಂದ 2024ರ ಮಾರ್ಚ 20ರವರೆಗೆ ಸಂಶಾದ ಅಹ್ಮದ್ ಅವರಿಗೆ ಅಡಿಕೆ ರವಾನಿಸಿದ್ದು, ಮೊದಲು ಸರಿಯಾಗಿ ಹಣ ಕೊಟ್ಟಿದ್ದರು. ಅದಾದ ನಂತರ ಸಂಶಾದ ಅಹ್ಮದ್ ಹಣ ಕೊಡದೇ ವಂಚಿಸಿದರು. ಅಡಿಕೆ ಖರೀದಿಯನ್ನು ನಿಲ್ಲಿಸಿದ ಸಂಶಾದ ಅಹ್ಮದ್ ಫೋನ್ ಮಾಡಿದರೂ ಸಿಗದ ಕಾರಣ ಸರ್ಪರಾಜ ಹಮೀದ್ ಶಿರಸಿಯಲ್ಲಿ ಪೊಲೀಸ್ ದೂರು ನೀಡಿದರು.
