
ಯಲ್ಲಾಪುರ: ಕನ್ನಡಗಲ್\’ನ ಕೊಡಸೆಯಲ್ಲಿ ವಾಸವಾಗಿದ್ದ ಜೆಸಿಬಿ ಚಾಲಕ ಉಮೇಶ್ ಮೇಟಿ ಎರಡು ತಿಂಗಳಿನಿoದ ಕಾಣುತ್ತಿಲ್ಲ.
ಬೆಳಗಾವಿಯ ಸವದತ್ತಿ ಮೂಲದ ಉಮೇಶ್ ಮೇಟಿ ಕನ್ನಡಗಲ್\’ದಲ್ಲಿ ಕುಟುಂಬಸಹಿತ ವಾಸವಾಗಿದ್ದ. ಮೇ 25ರಂದು ಮನೆಯಿಂದ ಹೊದ ಈತ ನಂತರ ಎಲ್ಲಿಯೂ ಕಂಡಿಲ್ಲ. ಈವರೆಗೂ ಆತ ಮನೆಗೆ ಮರಳಿಲ್ಲ. ಅಂದಿನಿoದ ಜೆಸಿಬಿ ಕೆಲಸಕ್ಕೆ ಸಹ ಹೋಗಿಲ್ಲ. ಮೂಲ ಊರಿನಲ್ಲಿ ವಿಚಾರಿಸಿದಾಗ ಅಲ್ಲಿ ಸಹ ಆತನನ್ನು ನೋಡಿದವರಿಲ್ಲ. ಇಷ್ಟು ದಿನಗಳ ಕಾಲ ಸಂಬoಧಿಕರ ಮನೆ ಹಾಗೂ ಊರಿನಲ್ಲಿ ಉಮೇಶನನ್ನು ಹುಡುಕಿದ ಆತನ ಪತ್ನಿ ನಾಗವೇಣಿ ಇದೀಗ ಪೊಲೀಸ್ ದೂರು ನೀಡಿದ್ದಾರೆ. ನಾಗವೇಣಿ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದಾರೆ.