
ಕಾರವಾರ: ಬಿಣಗಾದಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬೈಕ್ ತಿರುಗಿಸಿದ್ದ ನೌಕಾ ಸಿಬ್ಬಂದಿ ಜೆಸ್ಟನ್ ಯಾಕೂಬ (36) ಎಂಬಾತನಿಗೆ ಚಂದನ್ ಚೇತನ ನಾಯಕ ಎಂಬ ಗುತ್ತಿಗೆದರ ಕಾರು ಗುದ್ದಿದ ಪರಿಣಾಮ ಜೆಸ್ಟಿನ್\’ನ ಕೈ ಮೂಳೆ ಮುರಿದಿದೆ.
ಕೇರಳ ಮೂಲದ ಜೆಸ್ಟನ್ ಯಾಕೂಬ (36) ಮುದುಗಾದಲ್ಲಿ ವಾಸವಾಗಿದ್ದಾರೆ. ಚಂದನ್ ಚೇತನ ನಾಯಕ ಅಂಕೋಲಾ ತಾಲೂಕಿನ ಹಿಚ್ಕಡದವರು. ಅಗಸ್ಟ್ 4ರ ಮಧ್ಯಾಹ್ನ ಜೆಸ್ಟನ್ ಬಿಣಗಾದಲ್ಲಿ ಪೆಟ್ರೋಲ್ ಹಾಕಿಸಲು ಬೈಕ್ ತಿರುಗಿಸಿದ್ದು, ಕಾರವಾರ ಕಡೆಯಿಂದ ಕಾರು ಓಡಿಸಿಕೊಂಡು ಬಂದ ಚೇತನ್ ಅವರ ಬೈಕಿಗೆ ಗುದ್ದಿದ್ದಾರೆ. ಇದರಿಂದ ಬೈಕ್ ಸವಾರನ ಕೈ ಮುರಿತದ ಜೊತೆ ಹಣೆಗೆ ಸಹ ಗಾಯವಾಗಿದೆ.