ಜೊಯಿಡಾ: ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಗೋಡ – ಅಣಶಿ ರಾಜ್ಯ ಹೆದ್ದಾರಿ 46ರ ಮರಡಾ ಬಳಿ ರಸ್ತೆ ಮೇಲೆ ಮೋರಿ ನೀರು ನಿಲ್ಲುತ್ತಿದೆ.
ಇಲ್ಲಿನ ಸಿಮೆಂಟ್ ಮೋರಿಯ ಪೈಪುಗಳಲ್ಲಿ ಗಟಾರದ ಹೂಳು ತುಂಬಿದ್ದರಿoದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಪರಿಣಾಮ ರಸ್ತೆಯ ಮೇಲೆ ರಾಡಿ ನೀರು ಹರಿಯುತ್ತಿದ್ದು, ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. `ಮಳೆಗಾಲದ ಪೂರ್ವದಲ್ಲಿ ಗಟಾರವನ್ನು ಸರಿಯಾಗಿ ಸ್ವಚ್ಛ ಮಾಡಿದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಈ ಬಗ್ಗೆ ತಿಳಿಸಿದರೂ ಲೋಕೋಪಯೋಗಿ ಇಲಾಖೆ ಕ್ರಮ ಜರುಗಿಸಿಲ್ಲ\’ ಎಂದು ಸ್ಥಳೀಯರಾದ ಗಣಪತಿ ದೂರಿದ್ದಾರೆ.