ಯಲ್ಲಾಪುರದ ಕಣ್ಣಿಗೇರಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಹೊಡೆದಾಟ ನಡೆದಿದೆ. ಅಲ್ಲಿನ ಶಾಲೆ ವಿಷಯವಾಗಿ ಪ್ರಶ್ನಿಸಿದ ಭಾಸ್ಕರ್ ಮಾಪ್ಸೇಕರ್ ಅವರನ್ನು ನಾಲ್ವರು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಕಣ್ಣಿಗೇರಿ ಶಾಲೆಯ ಕಪೌಂಡ್ನ್ನು ಏಕಾಏಕಿ ಒಡೆಯಲಾಗಿದ್ದು, ಇದಕ್ಕೆ ಭಾಸ್ಕರ್ ಮಾಪ್ಸೇಕರ್ ವಿರೋಧವ್ಯಕ್ತಪಡಿಸಿದ್ದರು. ಇದೇ ವಿಷಯವಾಗಿ ಅವರು ಗ್ರಾಮಸಭೆಯಲ್ಲಿ ಧ್ವನಿ ಎತ್ತಿದ್ದರು. ಇದನ್ನು ಸಹಿಸದ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಗ್ರಾ ಪಂ ಸದಸ್ಯ ವಾಸುದೇವ ಮಾಪ್ಸೇಕರ್, ಆ ಊರಿನ ಸಿದ್ದೇಶ್ವರ ಮಾಪ್ಸೇಕರ್ ಹಾಗೂ ಮತ್ತೊಬ್ಬರು ಭಾಸ್ಕರ್ ಮಾಪ್ಸೇಕರ್ ಅವರ ವಿರುದ್ಧ ತಿರುಗಿಬಿದ್ದರು.
ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸ್ಪಷ್ಠನೆ ನೀಡುವ ಮುನ್ನ ಅಲ್ಲಿದ್ದ ಖುರ್ಚಿಯಿಂದ ಭಾಸ್ಕರ್ ಮಾಪ್ಸೇಕರ್ ಅವರಿಗೆ ಹೊಡೆದರು. ಸಭೆಯಲ್ಲಿ ಏಕಾಏಕಿ ಹೊಡೆದಾಟ ನಡೆದಿದ್ದರಿಂದ ಸಭಿಕರು ತಬ್ಬಿಬ್ಬಾದರು. ನೋಡೆಲ್ ಅಧಿಕಾರಿ ನರೇಶ ಜಿ ಬಿ ಹಾಗೂ ಪಿಡಿಒ ಎಚ್ ಸಿ ವಿರಕ್ತಿಮಠ ಮಧ್ಯ ಪ್ರವೇಶಿಸಿ ಹೊಡೆದಾಟ ಮುಂದುವರೆಯದoತೆ ತಡೆದರು.
ಅದಾದ ನಂತರ `ಇಲಾಖೆಗೆ ಮಾಹಿತಿ ನೀಡದೇ ಕಂಪೌAಡ್ ಒಡೆದಿರುವುದು ಸರಿಯಲ್ಲ. ಅದನ್ನು ಸರಿಪಡಿಸಿ’ ಎಂದು ಅಧಿಕಾರಿಗಳು ಶಾಲಾ ಅಭಿವೃದ್ಧಿ ಸಮಿತಿಗೆ ಸೂಚಿಸಿದರು. ಹೊಡೆದಾಟದ ಬಗ್ಗೆ ಭಾಸ್ಕರ್ ಮಾಪ್ಸೆಕರ್ ಪೊಲೀಸರ ಬಳಿ ಹೇಳಿಕೊಂಡಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿದರು.
