ಶಿರಸಿ ದಾಸನಕೊಪ್ಪದ ಚಿನ್ನದ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲಿರುವ ಬೆಳ್ಳಿ-ಬಂಗಾರ ಕದ್ದು ಪರಾರಿಯಾಗಿದ್ದಾರೆ. ಬಂಗಾರ ಅಂಗಡಿ ಪಕ್ಕದ ಮನೆಯಲ್ಲಿಯೂ ಕಳ್ಳರು ಕೈ ಚಳಕ ಪ್ರದರ್ಶಿಸಿದ್ದಾರೆ.
ದಾಸನಕೊಪ್ಪದಲ್ಲಿ ಜೀವನ ಶೇಟ್ ಅವರು ವಿಘ್ನೇಶ್ವರ ಹೆಸರಿನ ಬಂಗಾರದ ಅಂಗಡಿ ನಡೆಸುತ್ತಿದ್ದರು. ಜೀವನ ಶೇಟ್ ಅವರ ಅಂಗಡಿಗೆ ಹೊಂದಿಕೊoಡು ಅವರ ಮಾವ ದತ್ತಾತ್ರೇಯ ಶೇಟ್ ಅವರ ಮನೆಯಿದ್ದು, ಜುಲೈ 12ರ ರಾತ್ರಿ ಕಳ್ಳರು ಆ ಮನೆ ಮೂಲಕ ಅಂಗಡಿಗೆ ನುಗ್ಗಿದರು.
ಮನೆಯ ಮುಂದಿನ ಬಾಗಿಲು ಒಡೆದು ಪ್ರವೇಶಿಸಿದ ಕಳ್ಳರು ಅಂಗಡಿಯ ಮೇಲ್ಚಾವಣಿ ಮುರಿದಿದ್ದರು. ಅದಾದ ನಂತರ ಚಿನ್ನದ ಅಂಗಡಿಯ ಕೌಂಟರಿನಲ್ಲಿದ್ದ ಬೆಳ್ಳಿ-ಬಂಗಾರದ ಆಭರಣಗಳನ್ನು ಎಗರಿಸಿದರು. ಮರುದಿನ ಬೆಳಗ್ಗೆ ಅಂಗಡಿಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಯಿತು.
ಹೀಗಾಗಿ ಜೀವನ ಶೇಟ್ ಅವರು ಬನವಾಸಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಹುಡುಕಾಟ ನಡೆಸಿದ್ದಾರೆ.
