ಕುಮಟಾ: ಬರ್ಗಿಯ ರಾಘವೇಂದ್ರ ಪಟಗಾರ ಮನೆಗೆ ಬಂದ ಹೆಬ್ಬಾವು ಅಲ್ಲಿನ ಕೋಳಿಯನ್ನು ನುಂಗಿದೆ.
ಸೋಮವಾರ ಮಧ್ಯಾಹ್ನ ಹೆಬ್ಬಾವು ಆಗಮಿಸಿದ್ದು, ಕೋಳಿಯನ್ನು ಭಕ್ಷಿಸಿ ಅಲ್ಲಿಯೇ ಓಡಾಡುತ್ತಿತ್ತು. ಇದನ್ನು ನೋಡಿದ ಮನೆಯವರು ಉರಗ ತಜ್ಞರಿಗೆ ಫೋನಾಯಿಸಿದರು. ಅಶೋಕ ಗೋಕರ್ಣ ಅವರು ಆಗಮಿಸಿ, ಈ ಹಾವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದರು. `ಈ ವರ್ಷದ ಮಳೆಗಾಲದಲ್ಲಿ ಇದು 4ನೇ ಬಾರಿ ಹೆಬ್ಬಾವು ಮನೆಗೆ ಆಗಮಿಸಿದ್ದು\’ ಎಂದು ಚಂದ್ರು ಪಟಗಾರ್ ತಿಳಿಸಿದರು.