ಕಾರವಾರ: ಬಿಇ ಓದಿ ಬೆಂಗಳೂರಿಗೆ ಹೋಗಿದ್ದ ಉದಯ ನಾಯ್ಕ (31) ಕೊರೊನಾ ಕಾರಣದಿಂದ ಊರಿಗೆ ಮರಳಿದ್ದು, ಉದ್ಯೋಗ ಕಳೆದುಕೊಂಡ ಕಾರಣ ಮಾನಸಿಕವಾಗಿ ಕುಗ್ಗಿದ್ದ. ಖಿನ್ನತೆಗೆ ಒಳಗಾಗಿದ್ದ ಆತನಿಗೆ ಮನೆಯವರು ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪ್ರಯೋಜನವಾಗಿರಲಿಲ್ಲ. ಹೀಗಿರುವಾಗ ಅಗಸ್ಟ 3ರಂದು ಆತ ಏಕಾಏಕಿ ಕಾಣೆಯಾಗಿದ್ದಾನೆ.
ಹಬ್ಬುವಾಡದ ಕೆಎಚ್ಬಿ ಕಾಲೋನಿಯಲ್ಲಿ ವಾಸವಾಗಿದ್ದ ಈತ ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡಿದ್ದ. ಅದಾದ ನಂತರ ಮನೆಗೆ ಬಂದವ ಮಾನಸಿಕವಾಗಿ ಕುಗ್ಗಿದ್ದ. ಉದ್ದವಾದ ಗಡ್ಡವನ್ನು ಸಹ ಬೆಳೆಸಿಕೊಂಡಿದ್ದ. ಈ ಮೊದಲು ಸಹ ಹೀಗೆ ಒಮ್ಮೆ ಹೀಗೆ ಮನೆಬಿಟ್ಟು ಗೋವಾಗೆ ಹೋಗಿದ್ದವ ನಂತರ ಮನೆಗೆ ಮರಳಿದ್ದ. ಆದರೆ, ಈ ಬಾರಿ ಎಷ್ಟು ಹುಡುಕಾಡಿದರೂ ಆತನ ಪತ್ತೆಯಾಗಿಲ್ಲ. ಮನೆಗೂ ಬಂದಿಲ್ಲ. ಬಿಳಿ ಮುಖ, ಕಪ್ಪು ಗಡ್ಡ ಹೊಂದಿದ ಈತ ಗೋದಿ ಬಣ್ಣದ ಅಂಗಿ ಹಾಗೂ ಅದೇ ಬಣ್ಣದ ಪ್ಯಾಂಟು ಧರಿಸಿದ್ದು, ಆತನನ್ನು ಹುಡುಕಿಕೊಡಿ ಎಂದು ಮನೆಯವರು ಪೊಲೀಸ್ ದೂರು ನೀಡಿದ್ದಾರೆ.