ಮುಂಡಗೋಡ: ಸುಳ್ಳಲ್ಲಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ ಜಿಂಕೆ ಸಾವನಪ್ಪಿದೆ.
ಆಹಾರ ಅರೆಸಿ ಕಾಡಿನಿಂದ ನಾಡಿನತ್ತ ಬಂದ ಜಿಂಕೆಯನ್ನು ನಾಯಿಗಳು ಬೆನ್ನಟ್ಟಿದ್ದು, ವನ್ಯಜೀವಿಗೆ ಅವು ಕಚ್ಚಿ ಗಾಯ ಮಾಡಿದ್ದವು. ಇದನ್ನು ನೋಡಿದ ಊರಿನ ಜನ ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸುವ ಪ್ರಯತ್ನ ನಡೆಸಿದರು. ಆದರೆ, ಉಪಚರಿಸುವ ವೇಳೆಯಲ್ಲಿಯೇ ಜಿಂಕೆ ಸಾವನಪ್ಪಿದೆ. ಅರಣ್ಯ ಇಲಾಖೆಯವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.