ಕಾರವಾರ: ಬಾಂಡಿಶೆಟ್ಟಾದ ಗ್ರಾಮದೇವ ಅಪಾರ್ಟಮೆಂಟ್\’ನಲ್ಲಿ ಕಳ್ಳತನ ನಡೆದಿದೆ.
ರೈಲ್ವೆ ಇಲಾಖೆಯಲ್ಲಿ ನೌಕರಿಯಲ್ಲಿರುವ ಗಿರಿಧರ ಅನಂತ ನಾಯ್ಕ (56) ಅವರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಅಗಸ್ಟ 6ರ ಬೆಳಗ್ಗೆ ಕಳ್ಳತನ ನಡೆದಿರುವುದು ಮನೆಯವರಿಗೆ ಗೊತ್ತಾಗಿದೆ. ಅಕ್ಕಪಕ್ಕದವರಿಗೆ ವಿಚಾರಿಸಿದರೂ ಕಳ್ಳನ ಸುಳಿವು ಸಿಕ್ಕಿಲ್ಲ. ಕಳ್ಳತನವಾದ ಚಿನ್ನಾಭರಣಗಳು ದೊರೆತಿಲ್ಲ.
ಮನೆಯ ಬೀಗ ಮುರಿದು ಕಳ್ಳರು ಒಳನುಗ್ಗಿದ್ದು, ಕಪಾಟಿನಲ್ಲಿದ್ದ 55 ಗ್ರಾಂ ಚಿನ್ನವನ್ನು ದೋಚಿದ್ದಾರೆ. ಜೊತೆಗೆ ಬೆಳ್ಳಿಯ ಸರ ಸಹ ಕಳ್ಳರ ಪಾಲಾಗಿದೆ. ಇದರಿಂದ 2.25 ಲಕ್ಷ ರೂ ನಷ್ಟವಾಗಿದ್ದು, ಕಳ್ಳನನ್ನು ಪತ್ತೆ ಮಾಡಿ ತಮ್ಮ ಸ್ವತ್ತು ಹಿಂತಿರುಗಿಸಿಕೊಡುವoತೆ ಅನಂತ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ.
ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಕಳ್ಳನ ಹುಡುಕಾಟದಲ್ಲಿದ್ದಾರೆ.