ಸ್ಕೂಟಿ ಗುದ್ದಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ ಮಂಚಿಕೇರಿಯ ಶಂಕರ್ ವೈದ್ಯ ಅವರು ಒಂದು ತಿಂಗಳ ಕಾಲ ನರಳಾಟ ನಡೆಸಿದ್ದು, ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಯಲ್ಲಾಪುರದ ಮಂಚಿಕೇರಿಯ ಶಂಕರ್ ವೈದ್ಯ (62) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. 2025ರ ಜೂನ್ 9ರಂದು ಅವರು ಮಂಚಿಕೇರಿ ಪೇಟೆ ಸುತ್ತಾಡುತ್ತಿದ್ದರು. ಇಲ್ಲಿನ ಪೊಲೀಸ್ ಹೊರಠಾಣೆ ಎದುರು ಅವರಿಗೆ ಬೈಕ್ ಗುದ್ದಿತು. ಪರಿಣಾಮ ಗಂಭೀರ ಪ್ರಮಾಣದಲ್ಲಿ ಅವರು ಗಾಯಗೊಂಡರು.
ಯಲ್ಲಾಪುರದಿoದ ಶಿರಸಿ ಕಡೆ ಜೋರಾಗಿ ಸ್ಕೂಟಿ ಓಡಿಸಿಕೊಂಡು ಹೊರಟಿದ್ದ ಶಿರಸಿಯ ಇಬ್ರಾರ ಖಾನ್ ಶಂಕರ್ ವೈದ್ಯ ಅವರಿಗೆ ಸ್ಕೂಟಿ ಗುದ್ದಿ ಪರಾರಿಯಾಗಿದ್ದರು. ಇದನ್ನು ನೋಡಿದ ಶಿರನಾಳದ ಶ್ರೀಧರ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದರು. ಅದಾದ ನಂತರ ಯಲ್ಲಾಪುರ ಆಸ್ಪತ್ರೆಗೆ ದಾಖಲಾಗ ಶಂಕರ್ ವೈದ್ಯ ಅವರು ಒಂದು ತಿಂಗಳ ಚಿಕಿತ್ಸೆಪಡೆದರು.
ಜುಲೈ 7ರಂದು ಆಸ್ಪತ್ರೆಯಿಂದ ಮನೆಗೆ ಹೋದ ಅವರು ಜುಲೈ 19ರಂದು ಸಾವನಪ್ಪಿದರು. ಶಿರಸಿ ಹವಾಲ್ದಾರ್ ಗಲ್ಲಿಯ ಇಬ್ರಾರ ಖಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
