ಮುoಡಗೋಡದ ಲಮಾಣಿತಾಂಡಾದಲ್ಲಿ ಕಳೆದ 5 ವರ್ಷಗಳಿಂದ ಅಲೆದಾಡುತ್ತಿದ್ದ ಬದ್ದಪ್ಪ ಲಮಾಣಿ ಸಾವನಪ್ಪಿದ್ದಾರೆ. ಅವರ ವಾರಸುದಾರರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
5 ವರ್ಷದ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬರು ಮುಂಡಗೋಡಿದ ಲಮಾಣಿತಾಂಡಾಗೆ ಬಂದರು. ತಮ್ಮನ್ನು ಬದ್ದಪ್ಪ ಲಮಾಣಿ ಎಂದು ಪರಿಚಯಿಸಿಕೊಂಡರು. ದಿಕ್ಕು-ದೆಸೆ ಇಲ್ಲದ ಅವರು ಸೇವಾಲಾಲ್ ಭವನದಲ್ಲಿ ವಸತಿ ಹೂಡಿದ್ದರು. ಅಲ್ಲಿ ಇಲ್ಲಿ ಅಲೆದಾಟ ನಡೆಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಈಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದರೂ ಬದ್ದಪ್ಪ ಲಮಾಣಿ ಚಿಕಿತ್ಸೆಪಡೆದಿರಲಿಲ್ಲ.
ಜುಲೈ 22ರಂದು ಸೇವಾಲಾಲ್ ಭವನದಲ್ಲಿ ಮಲಗಿದ್ದ ಅವರು ಜೀವಂತವಾಗಿದ್ದರು. ಜುಲೈ 23ರಂದು ನೋಡಿದಾಗ ಉಸಿರಾಡುತ್ತಿರಲಿಲ್ಲ. ಸಾವಿನಲ್ಲಿ ಸಂಶಯವಿಲ್ಲದಿದ್ದರೂ ಆ ಅಪರಿಚಿತನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಲಮಾಣಿ ತಾಂಡಾದ ಸುರೇಶ ಚಂದಾಪುರ ಅವರು ಮುಂಡಗೋಡು ಪೊಲೀಸರಿಗೆ ದೂರು ನೀಡಿದ್ದಾರೆ.
—
