• Latest
Sadhguru's blessings Golden opportunity for musical talents

ಸದ್ಗುರು ಆಶೀರ್ವಾದ: ಸಂಗೀತ ಪ್ರತಿಭೆಗಳಿಗೆ ಸುವರ್ಣ ಅವಕಾಶ

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಸದ್ಗುರು ಆಶೀರ್ವಾದ: ಸಂಗೀತ ಪ್ರತಿಭೆಗಳಿಗೆ ಸುವರ್ಣ ಅವಕಾಶ

ಸದ್ಗುರು ಶ್ರೀ ಮಧುಸೂಧನ್ ಸಾಯಿ ಮಾರ್ಗದರ್ಶನದಲ್ಲಿ ಯುವ ಸಂಗೀತ ಪದವೀಧರ ಮ್ಯೂಸಿಕಲ್ ಕಾನ್ಸರ್ಟ್

uknews9.comby uknews9.com
in ಸಿನಿಮಾ
Sadhguru's blessings Golden opportunity for musical talents
ADVERTISEMENT
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿರುವ ಸದ್ಗುರು ಶ್ರೀ ಮಧುಸೂಧನ್ ಸಾಯಿ ರವರ ಒನ್ ವರ್ಡ್ ಒನ್ ಫ್ಯಾಮಿಲಿ ವಿಷನ್ ಮೂಲಕ ಸಾಯಿ ಸಿಂಪನಿ ಆರ್ಕೆಸ್ಟ್ರಾ ತಂಡದಿಂದ ಯುವ ಪ್ರತಿಭೆಗಳ ಸಂಗೀತ ಮ್ಯೂಸಿಕಲ್ ಕಾನ್ಸರ್ಟ್ ಕಾರ್ಯಕ್ರಮವನ್ನು ಬೃಹತ್ ಸಭಾಂಗಣದಲ್ಲಿ ಸುಂದರ ಪರಿಸರದ ನಡುವೆ ಹಮ್ಮಿಕೊಳ್ಳಲಾಯಿತು.
ಈ ಒಂದು ಕಾರ್ಯಕ್ರಮಕ್ಕೆ ಪದ್ಮಭೂಷಣ , ಗ್ರ್ಯಾಮಿ ಅವಾರ್ಡ್ ವಿನ್ನರ್ , ಮ್ಯೂಸಿಕಲ್ ಮಾಂತ್ರಿಕ  ಎ. ಆರ್. ರೆಹಮಾನ್ , ಕ್ಲಾಸಿಕಲ್ ಹಾಗೂ ಭಕ್ತಿ ಪ್ರಧಾನ ಸಂಗೀತ ನಿರ್ದೇಶಕ ಪಂಡಿತ್ ಬಾಗ್ದೀಪ್ , ಪ್ರಪಂಚದಾದ್ಯಂತ ಭಕ್ತಿ ಸುಧೆಯ ಸಂಗೀತ ಮಾಂತ್ರಿಕ  ಸುಮಿತ್ ಟಾಕೂ , ಎ.ಆರ್. ರೆಹಮಾನ್ ಟೀಮ್ನಲ್ಲಿರುವ ಶುಭಂ ಭಟ್, ಅಬ್ದುಲ್, ಸತ್ಯಸಾಯಿ ಲೋಕಸೇವಾ ಗ್ರೂಪ್ ಆಫ್ ಗುರುಕುಲಂ ಚೀಫ್ ಮೆಂಟರ್ ಬಿ.ಎನ್. ನರಸಿಂಹಮೂರ್ತಿ  ಸೇರಿದಂತೆ ದೇಶ , ವಿದೇಶಗಳ ಪ್ರಖ್ಯಾತ ಸಂಗೀತ ಮಾಂತ್ರಿಕರು , ಗಣ್ಯರು , ಹಿತೈಷಿಗಳು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದಿದ್ದು ಬಹಳ ವಿಶೇಷವಾಗಿತ್ತು.
ಈ ಸಂಸ್ಥೆಯ ವ್ಯವಸ್ಥಾಪಕ, ಸಾಯಿ ಗ್ಲೋಬಲ್ ರುವಾರಿ , ಒನ್ ವರ್ಡ್ ಒನ್ ಫ್ಯಾಮಿಲಿ ವಿಷನ್ ಮುಖ್ಯಸ್ಥ  ಸದ್ಗುರು ಶ್ರೀ ಮಧುಸೂಧನ್ ಸಾಯಿ ಮಾತನಾಡುತ್ತಾ ಈ ಒಂದು  ಸಂಗೀತ ಪ್ರತಿಭೆಗಳ ಕಾರ್ಯಕ್ರಮಕ್ಕೆ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಬಂದಿದ್ದು ಬಹಳ ಸಂತೋಷದ ವಿಚಾರ. ನಾನು ಅವರನ್ನ ಜೂಮ್ ಆಪ್ ಗೆ ಬನ್ನಿ ವಿದ್ಯಾರ್ಥಿಗಳ ಜೊತೆ ಮಾತನಾಡಿ ಎಂದಿದ್ದೆ , ಆದರೆ ಅವರು ಯುವ ಪ್ರತಿಭೆಗಳನ್ನ ಪ್ರೋತ್ಸಾಹಿಸಲು ನಾನು ನೇರವಾಗಿ ಬರುತ್ತೇನೆ ಎಂದು ಬಂದಿರುವುದೇ ತಿಳಿಯುತ್ತೆ ಅವರಿಗೆ ಸಂಗೀತ ಮೇಲೆ ಇರುವ ಪ್ರೀತಿ ಎಷ್ಟಿದೆ ಎಂದು. ಇದು ನಮ್ಮ ಸಂಸ್ಥೆಗೂ ಹೆಮ್ಮೆಯ ತರುವ ವಿಚಾರವಾಗಿದೆ ಎಂದರು.
ನಂತರ ಮುಖ್ಯ ಅತಿಥಿ , ಪದ್ಮಭೂಷಣ ,  ಗ್ರ್ಯಾಮಿ ಅವಾರ್ಡ್ ವಿನ್ನರ್ , ಮ್ಯೂಸಿಕಲ್  ಮಿಸ್ಟ್ರೋ ಮಿಸ್ಟರ್ ಎ.ಆರ್. ರೆಹಮಾನ್  ಮಾತನಾಡುತ್ತಾ ನಾನು ಕೂಡ 15 ವರ್ಷ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡಿ ಚೆನ್ನೈನಲ್ಲಿ ಕ್ಲಾಸಿಕಲ್ , ಕವಾಲಿ , ಹಿಂದುಸ್ತಾನಿ , ಸಂಗೀತ ತರಬೇತಿ ನಡೆಸುತ್ತಿದೆ. ನನಗೆ ಗುರುಗಳಿಂದ ಆರ್ಕೆಸ್ಟ್ರಾ ನಡೆಸುತ್ತಿದ್ದೇವೆ  ಎಂದು ತಿಳಿದು ತಕ್ಷಣ ಆಶ್ರವಾಯಿತು , ಎಲ್ಲಿ ಎಂದು ಕೇಳಿ ವಿಚಾರ ತಿಳಿದುಕೊಂಡು ಬಂದೆ. ಇತ್ತೀಚಿಗೆ ಪೂರ್ವದಲ್ಲಿ ಆರ್ಕೆಸ್ಟ್ರಾ ಮುಚ್ಚುತ್ತಿದ್ದರೆ , ಪಶ್ಚಿಮದಲ್ಲಿ ಆರ್ಕೆಸ್ಟ್ರಾ ಸದ್ದು ಮಾಡಿ ಬೆಳೆಯುತ್ತಿದೆ. ಇದೊಂದು ಒಳ್ಳೆ ಬೆಳವಣಿಗೆ, ಭಾರತದಲ್ಲಿ ಒಂದು ಉತ್ತಮ ಆರ್ಕೆಸ್ಟ್ರಾ ತಂಡವಾಗಿ ಹೊರಬರುವ ಎಲ್ಲಾ ಲಕ್ಷಣಗಳು ಈ ತಂಡಕ್ಕೆ ಇದೆ. ಸಂಗೀತ ಕಲಿತವರಿಗೆ ನೆಮ್ಮದಿ , ಸಂತೋಷ ಸಿಗುತ್ತದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಹಣ ಹಾಗೂ ಸಲಕರಣೆಯ ಕೊರತೆ ಇಲ್ಲದಂತೆ ಸಾಯಿ ಸಿಂಪನಿ ಆರ್ಕೆಸ್ಟ್ರಾ ಟೀಮ್ ಕಟ್ಟಿರುವ ಈ ಸಂಸ್ಥೆಗೆ ಶುಭವಾಗಲಿ ಎಂದರು. ನಂತರ ವೇದಿಕೆ ಮೇಲಿದ್ದಂತಹ ಎಲ್ಲಾ ಸಂಗೀತ ಗಣ್ಯರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಾಯಿ ಸಿಂಪನಿ ಆರ್ಕೆಸ್ಟ್ರಾ ಬ್ಲಾಸ್ಟ್ ಬ್ಯಾಂಡ್  ಟೀಮ್ 2015ರಲ್ಲಿ  ಸದ್ಗುರು ಶ್ರೀ ಮಧುಸೂಧನ್ ಸಾಯಿ ಮಾರ್ಗದರ್ಶನದಲ್ಲಿ ಆರಂಭಗೊಂಡಿದ್ದು, ಇದರ ಉದ್ದೇಶ ಭಾರತದಲ್ಲಿರುವ ಗ್ರಾಮೀಣ ಪ್ರದೇಶದ  ಪ್ರತಿಭೆಗಳನ್ನು ಹುಡುಕಿ ಕರೆತಂದು , ನಂಬಿಕೆ ಧೈರ್ಯವನ್ನು ತುಂಬಿ ಸಮಾಜದಲ್ಲಿ ಒಂದು ಉತ್ತಮ ಸ್ಥಾನವನ್ನ ಗಳಿಸಲು ದಾರಿ ತೋರುವ ಉದ್ದೇಶವಾಗಿದೆ. ಡಾ. ಡಿಮ್ಟ್ರೀಸ್ ಲಂಬ್ರಿಯಾನೋ ಗುರುಗಳ ಮಾರ್ಗದರ್ಶನದಲ್ಲಿ ಕಲಿತು 2020 ರಲ್ಲಿ ಇಡೀ ತಂಡ ವಿವಿಧ ಸಂಗೀತದ ಸಲಕರಣೆಗಳ ಜೊತೆ ಒಂದು ಉತ್ತಮ ತಂಡವನ್ನು ಕಟ್ಟಿಕೊಂಡು , ತದನಂತರ ದೇಶ , ವಿದೇಶಗಳ ಇನ್ಸ್ಟ್ರುಮೆಂಟಲ್ ಗಳನ್ನ  ತರಿಸಿಕೊಂಡು ವೆಸ್ಟರ್ನ್ ,  ಜಾಗ್ , ಪಾಪ್ , ವರ್ಡ್ ಮ್ಯೂಸಿಕ್ಗಳ ಜೊತೆ ದೊಡ್ಡ ಕಾನ್ಸರ್ಟ್ ನಡೆಸಿದೆ. ಯುವ ಪ್ರತಿಭೆಗಳು ಲಿಖಿತ್ ಸಾಯಿ, ಮಯೂರ್, ಓಂ ಸಾಯಿ ಪ್ರಧಾನ್ ಸಂಗೀತದಲ್ಲಿ ಸತ್ಯಸಾಯಿ ಯುನಿವರ್ಸಿಟಿ ಮೂಲಕ  ಪದವಿಯನ್ನ ಪಡೆದಿದ್ದಾರೆ. ಈ ಯುವ ತಂಡದಿಂದ ಲೈವ್ ಇನ್ಸ್ಟ್ರುಮೆಂಟ್ಗಳ ಸಂಗೀತದ ಸಂಜೆಯನ್ನು ನಡೆಸಲಾಯಿತು.
ಹಾಗೆಯೇ ಇದೇ ಸಂಸ್ಥೆಯಲ್ಲಿ ಸಂಗೀತದ ತರಬೇತಿಯನ್ನ ಪಡೆದಂತ ವಿದ್ಯಾರ್ಥಿಗಳು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಜೊತೆಗೆ ಈ ಸದ್ಗುರು ಮಿಷನ್  ಸಂಸ್ಥೆ ಹೇಳಿಕೊಡುವ ಮಾರ್ಗದರ್ಶನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ನಮ್ಮಂತ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಸಂಗೀತ ಕ್ಷೇತ್ರದಲ್ಲಿ ಒಂದು ಉತ್ತಮ ನೆಲೆ ಕಾಣಲು ದಾರಿ ಮಾಡಿಕೊಡುತ್ತಿದ್ದಾರೆ ಎಂದರು. ಈ ಸಂಸ್ಥೆಯು ಇನ್ನೂ ಹೆಚ್ಚು ಹೆಚ್ಚು ಆಸಕ್ತ ಯುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ , ಸಂಗೀತದಲ್ಲಿ ತರಬೇತಿ ನೀಡಿ ದೊಡ್ಡ ಕ್ರಾಂತಿ ಮಾಡುವ ಉದ್ದೇಶವನ್ನು ಹೊಂದಿರುವಂತಿದೆ. ಒಟ್ಟಿನಲ್ಲಿ ಒಳ್ಳೆ ಉದ್ದೇಶದಿಂದ ಸಾಗಿರುವ ಈ ಸಂಸ್ಥೆಯ ಉದ್ದೇಶ ಯಶಸ್ಸಿನ ಹಾದಿಯಲ್ಲಿ ಸಾಗುವಂತಾಗಲಿ.
ADVERTISEMENT
ADVERTISEMENT
Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

Discussion about this post

Previous Post

ಆತನ ಕಾಟ ಒಂದೆರಡಲ್ಲ.. ಮರಿ ಪುಡಾರಿಗೆ ಬೆದರಿದ ಶಾಲಾ ಮಕ್ಕಳು!

Next Post

ಸೋರುವ ಬಸ್ ನಿಲ್ದಾಣ: ದುರಸ್ಥಿಗೆ ಆಗ್ರಹ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋