ಭಟ್ಕಳ ತೆಂಗಿನಗುoಡಿಯಲ್ಲಿರುವ ದೇವಾಲಯವೊಂದರಲ್ಲಿ ಕಳ್ಳತನ ನಡೆದಿದೆ. ಪ್ರವೇಶವಿಲ್ಲದ ಗರ್ಭಗುಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಪೂಜಾ ಸಾಮಗ್ರಿ ಕದ್ದು ಪರಾರಿಯಾಗಿದ್ದಾರೆ.
ತೆಂಗಿನಗುoಡಿಯಲ್ಲಿ ಅನಾಧಿಕಾಲದಿಂದಲೂ ಬ್ರಹ್ಮಲಿಂಗೇಶ್ವರ ನಾಗದೇವತಾ ದೇವಸ್ಥಾನವಿದ್ದು, ಇಲ್ಲಿನ ಮಾಧವ ಪ್ರಭು ಅವರು ಆ ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಪ್ರಭು ಕುಟುಂಬದ ಒಡೆತನದಲ್ಲಿ ಆ ದೇವಸ್ಥಾನ ನಡೆಯುತ್ತಿತ್ತು. ಅಡಿಕೆ ವ್ಯಾಪಾರಿಯಾಗಿರುವ ಮಾಧವ ಪ್ರಭು ಅವರು ಭಕ್ತಿಯಿಂದ ದೇವರ ಪೂಜೆ ಮಾಡುತ್ತಿದ್ದರು.
ಆದರೆ, ಜುಲೈ 27ರ ಬೆಳಗ್ಗೆ ಆ ದೇಗುಲದ ಮೇಲೆ ಕಳ್ಳರ ವಕೃದೃಷ್ಠಿ ಬಿದ್ದಿತು. ಪರಿಣಾಮ ದೇವಾಲಯಕ್ಕೆ ಅಳವಡಿಸಿದ್ದ ಬೀಗ ಒಡೆದ ಕಳ್ಳರು ದೇವರ ಮುಂದಿದ್ದ ತಾಮ್ರದ ಪಾತ್ರೆಗಳನ್ನು ಅಪಹರಿಸಿದರು. 51 ಸಾವಿರ ರೂ ಮೌಲ್ಯದ ಪಾತ್ರೆಗಳು ಕಾಣೆಯಾದ ಬಗ್ಗೆ ಮಾಧವ ಪ್ರಭು ಅವರು ಪೊಲೀಸ್ ದೂರು ನೀಡಿದರು. ಅಪರಿಚಿತ ಕಳ್ಳರು ದೇವಾಲಯಕ್ಕೆ ನುಗ್ಗಿ ಕಳ್ಳತನ ನಡೆಸಿದ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
