`ಉಳುವವನೇ ಭೂ (Land) ಒಡೆಯ ಕಾನೂನಿನ ಮೂಲಕ ಜಮೀನು ಪಡೆದ ರೈತರ ಸಮಸ್ಯೆ ಬಗೆಹರಿಸುವಂತೆ ಡಿ ದೇವರಾಜ ಅರಸು ವೇದಿಕೆಯ ಅಧ್ಯಕ್ಷ ಅನಂತ ನಾಯ್ಕ ಒತ್ತಾಯಿಸಿದ್ದಾರೆ.
ಹೊನ್ನಾವರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಡಿ ದೇವರಾಜ ಅರಸು ಅವರು ಜಾರಿಗೆ ತಂದ `ಉಳುವವನೇ ಹೊಲದೊಡೆಯ\’ ಎಂಬ ಭೂ ಸುಧಾರಣೆ ಕಾನೂನಿಗೆ 50 ವರ್ಷ ತುಂಬಿದೆ. ಆದರೆ, ಸಾವಿರಾರು ರೈತರ ಪಹಣಿಯಲ್ಲಿ ಇಂದಿಗೂ ಕರ್ನಾಟಕ ಸರ್ಕಾರದ ಹೆಸರಿದೆ. ಇದರಿಂದ ರೈತರಿಗೆ ಅನೇಕ ಸಮಸ್ಯೆಗಳು ಎದುರಾಗಿದ್ದು, ಹಲವು ಬಾರಿ ಹಲವು ವರ್ಷಗಳಿಂದ ಅರಸು ವಿಚಾರ ವೇದಿಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ\’ ಎಂದು ದೂರಿದರು.
`ಈ ಕಾನೂನು ಜಾರಿಗೊಳಿಸಿದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸುರವರ 109ನೇ ಜನ್ಮ ದಿನಾಚರಣೆ ದಿನ ಕರ್ನಾಟಕ ಸರ್ಕಾರ ಮುಕ್ತ ಪಹಣಿಗಾಗಿ ಸರ್ಕಾರವನ್ನು ಆಗ್ರಹಿಸಿ ರೈತರಿಂದ ಮನವಿ ಸಲ್ಲಿಸುವ ಜನಪರ ಕಾರ್ಯಕ್ರಮ ಆಯೋಜಿಸಿದೆ\’ ಎಂದು ತಿಳಿಸಿದರು.
`ಕರ್ನಾಟಕ ಸರ್ಕಾರ ಪಹಣಿ ಉಳ್ಳ ರೈತರು ಆ 20ರಂದು ಬೆಳಗ್ಗೆ 10 ಘಂಟೆಗೆ ಹೊನ್ನಾವರ ಪಟ್ಟಣದ ಸೋಶಿಯಲ್ ಕ್ಲಬ್ನಲ್ಲಿ ಸಭೆ ಸೇರಬೇಕಾಗಿದೆ. ರೈತರು ತಾವು ಭರ್ತಿಮಾಡಿದ ಅರ್ಜಿಗಳೊಂದಿಗೆ ಬಂದು, ಮೆರವಣಿಗೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸುವುದರ ಮೂಲಕ ಸರ್ಕಾರವನ್ನು ಜಾಗೃತಗೊಳಿಸಬೇಕು\’ ಎಂದು ಕರೆ ನೀಡಿದರು.