ಮೇಷ ರಾಶಿ: ಉದ್ಯಮಿಗಳಿಗೆ ಉತ್ತಮ ಲಾಭ ಸಿಗಲಿದೆ. ಇಡೀ ದಿನ ಚೈತನ್ಯದಿಂದ ಕೂಡಿರಲಿದೆ. ಅನಿರೀಕ್ಷಿತವಾಗಿ ಆಪ್ತರ ಆಗಮನ ಸಾಧ್ಯತೆಯಿದೆ.
ವೃಷಭ ರಾಶಿ: ವ್ಯಾಪಾರಿಗಳಿಗೆ ಈ ದಿನ ವ್ಯಾಪಾರದಲ್ಲಿ ಹಾನಿ ಉಂಟಾಗುವ ಲಕ್ಷಣವಿದೆ. ವ್ಯಾಪಾರ ವೃದ್ಧಿಗೆ ಹಣ ಖರ್ಚು ಮಾಡುವ ಅನಿವಾರ್ಯ ಎದುರಾಗಲಿದೆ. ಅನಗತ್ಯ ವಿಷಯಗಳಿಗೆ ಗಮನಕೊಡಬೇಡಿ. ಮಕ್ಕಳ ಬಗ್ಗೆ ಅತಿಯಾದ ಉದಾರತೆ ತೋರುವುದು ಅಪಾರಕ್ಕೆ ಕಾರಣ.
ಮಿಥುನ ರಾಶಿ: ನಿಮ್ಮ ವಿಶ್ವಾಸ ಮತ್ತು ಚೈತನ್ಯ ಇಂದು ಅಧಿಕವಾಗಿರುತ್ತದೆ. ಈ ದಿನ ಹಣ ನಿಮ್ಮ ಕೈಯಲ್ಲಿ ಉಳಿಯುದಿಲ್ಲ. ಉಳಿತಾಯದ ವಿಷಯದಲ್ಲಿ ಸಮಸ್ಯೆ ಬರಲಿದೆ. ದೂರದ ಸಂಬoಧಿಕರಿoದ ಅನಿರೀಕ್ಷಿತವಾದ ಶುಭ ಸುದ್ದಿ ಬರಲಿದೆ. ಕುಟುಂಬದಲ್ಲಿ ಸಂತಸ ಸಿಗಲಿದೆ.
ಕರ್ಕ ರಾಶಿ: ವಿದೇಶದಲ್ಲಿ ವ್ಯಾಪಾರ ಮಾಡುವವರಿಗೆ ಅಧಿಕ ಲಾಭ ಸಿಗಲಿದೆ. ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಸಮಯ ಕಳೆಯಲು ಹೆಚ್ಚಿನ ಅವಕಾಶ ಸಿಗಲಿದೆ.
ಸಿಂಹ ರಾಶಿ: ನಿಮ್ಮ ಸ್ವಭಾವ ಮಗುವಿನ ಹಾಗೇ ಕಾಣುತ್ತದೆ. ಆಹ್ಲಾದಕರ ಮನಸ್ಥಿತಿ ಅನುಭವಿಸುತ್ತೀರಿ. ಸಾಲ ಕೇಳಲು ಬರುವವರ ಬಗ್ಗೆ ವಿಚಾರಿಸಿ, ನಂಬಿಕೆ ಪರಿಶೀಲಿಸಿ ಹಣ ಕೊಡಿ.
ಕನ್ಯಾ ರಾಶಿ: ವಿವಾಹಿತರು ಮಕ್ಕಳ ಬಗ್ಗೆ ಕಾಳಜಿವಹಿಸಿ. ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಿ. ಮನೆಯಲ್ಲಿನ ಹಬ್ಬದ ವಾತಾವರಣ ನಿಮ್ಮ ಉದ್ವೇಗ ಶಮನಗೊಳಿಸುತ್ತದೆ.
ತುಲಾ ರಾಶಿ: ದಿನದ ಪ್ರಾರಂಭವು ಸ್ವಲ್ಪ ದಣಿದಿರಬಹುದು. ಆದರೆ ದಿನ ಮುಂದುವರೆದAತೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ದಿನದ ಕೊನೆಯಲ್ಲಿ ನಿಮಗಾಗಿ ಸಮಯ ಸಿಗುತ್ತದೆ. ನಿಕಟ ವ್ಯಕ್ತಿಯನ್ನು ಭೇಟಿಯಾಗುವ ಮೂಲಕ ನೀವು ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಬಹುದು.
ವೃಶ್ಚಿಕ ರಾಶಿ: ನಿಮ್ಮ ನಿರಾಶಾದಾಯಕ ನಡವಳಿಕೆಯಂದಾಗಿ ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಚಿಂತೆ ನಿಮ್ಮ ಚಿಂತನಾ ಶಕ್ತಿ ಯನ್ನು ಕುಂಠಿತ ಮಾಡುತ್ತದೆ. ಸಕಾರಾತ್ಮಕವಾಗಿ ಯೋಜಿಸಿ, ಅರಿತು ಮುನ್ನಡೆಯಲು ಸಕಾಲ. ವಿವೇಚನೆಯಲ್ಲಿ ಗಮನಾರ್ಹ ಬದಲಾವಣೆ ಸಾಧ್ಯ.
ಧನು ರಾಶಿ: ಆರೋಗ್ಯದ ಬಗ್ಗೆ ಗಮನಕೊಡಿ. ಮನೆಯಿಂದ ಹೊರಗೆ ಹೋಗುವಾಗ ಹಿರಿಯರ ಆಶೀರ್ವಾದಪಡೆಯಿರಿ. ನಿಮ್ಮ ಜೀವನಶೈಲಿಯಿಂದ ಮನೆಯಲ್ಲಿ ಆತಂಕವಾಗಬಹುದು. ಇತರರ ಮೇಲೆ ಬಹಳ ಖರ್ಚು ಮಾಡುವುದನ್ನು ತಪ್ಪಿಸಿ.
ಮಕರ ರಾಶಿ: ಆಧ್ಯಾತ್ಮಿಕ ಜೀವನ ಪೂರ್ವಾಪೇಕ್ಷಿತವಾಗಿದ್ದು, ಮಾನಸಿಕ ಆರೋಗ್ಯ ಕಾಯ್ದುಕೊಳ್ಳಿ. ಮನಸ್ಸಿನ ಮೂಲಕವೇ ಒಳ್ಳೆಯದು ಹಾಗೂ ಕೆಟ್ಟದರ ಬಗ್ಗೆ ಯೋಚಿಸಿ. ಜೀವನದ ಸಮಸ್ಯೆ ಬಗೆಹರಿಸುವಲ್ಲಿ ಚಿಂತನೆ ಮಾಡಿ.
ಕುಂಭ ರಾಶಿ: ನಿಮಗೆ ಯಾವುದು ಒಳ್ಳೆಯದು ಎಂದು ನಿಮಗೆ ಮಾತ್ರ ಗೊತ್ತು. ಆದ್ದರಿಂದ ಧೃಢವಾಗಿರಿ ಮತ್ತು ಧೈರ್ಯಶಾಲಿಯಾಗಿರಿ. ತಕ್ಷಣದ ನಿರ್ಧಾರ ತೆಗೆದುಕೊಂಡು ಫಲಿತಾಂಶಕ್ಕೆ ಸಿದ್ಧವಾಗಿರಿ. ಕೆಲವು ದುಃಖದ ಸಮಯದಲ್ಲಿ ನೀವು ಸಂಗ್ರಹಿಸುವ ಹಣ ಮಾತ್ರ ನಿಮ್ಮ ಕೆಲಸಕ್ಕೆ ಬರುತ್ತದೆ.
ಮೀನ ರಾಶಿ: ದೇಹದ ನೋವು ಹಾಗೂ ಒತ್ತಡ ಸಮಸ್ಯೆ ತಳ್ಳಿ ಹಾಕಲು ಸಾಧ್ಯವಿಲ್ಲ. ತಿಳಿದ ಜನರ ಮೂಲಕ ಆದಾಯ ಬರಲಿದೆ. ಮಕ್ಕಳ ಜೊತೆ ಸಮಯ ಕಳೆಯಿರಿ. ಮಕ್ಕಳಿಗೆ ಜೀವನ ಮೌಲ್ಯದ ಬಗ್ಗೆ ತಿಳಿಸಿರಿ. ನಿಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ.
