ಮುಂಡಗೋಡಿನ ಅಮ್ಮಾಜಿ ಕೆರೆಯ ಬಳಿ ಕುರಿ ಸಾಕಾಣಿಕಾ ಕೇಂದ್ರಕ್ಕೆ ಬೆಂಕಿ (Fire accident) ಬಿದ್ದಿದೆ. ಇದರಿಂದ ಅಲ್ಲಿದ್ದ 78 ಕುರಿಗಳು ಸಜೀವ ದಹನವಾಗಿದೆ.
ಬುಧವಾರ ಮಧ್ಯಾಹ್ನ ಈ ಅಗ್ನಿ ಅವಘಡ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿ ಜ್ವಾಲೆ ಆರಿಸುವ ಪ್ರಯತ್ನ ನಡೆಸಿದರು. ಆದರೆ, ಪ್ರಯೋಜನವಾಗಿಲ್ಲ. ನಜೀರ ಅಹ್ಮದ ದರ್ಗಾವಾಲೆ ಎಂಬಾತರಿಗೆ ಸೇರಿದ ಕುರಿ ಸಾಕಾಣಿಕಾ ಕೇಂದ್ರ ಇದಾಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಅವಘಡಕ್ಕೆ ಖಚಿತ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.