ಭಟ್ಕಳದ ಆಳ್ವೆಕೊಡಿ ಸಮುದ್ರ ತೀರದಲ್ಲಿ ಬುಧವಾರ ನಡೆದಿದ್ದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರಲ್ಲಿ ಒಬ್ಬರ ಶವ ಸಿಕ್ಕಿದೆ. ಉಳಿದ ಮೂವರಿಗಾಗಿ ಶೋಧ ಮುಂದುವರೆದಿದೆ.
ಗುರುವಾರ ಮಧ್ಯಾಹ್ನ ಹೊನಗದ್ದೆ ಕಡಲತೀರಕ್ಕೆ ಶವವೊಂದು ತೇಲಿ ಬಂದಿದ್ದು, ಮೀನುಗಾರರು ಅದನ್ನು ರಾಮಕೃಷ್ಣ ಮೊಗೇರ್ ಅವರ ದೇಹ ಎಂದು ಗುರುತಿಸಿದರು. ಉಳಿದ ಮೂವರ ಶೋಧಕ್ಕಾಗಿ ಹಲವು ದೋಣಿಗಳು ಸಮುದ್ರದಲ್ಲಿ ಸುತ್ತುವರೆಯುತ್ತಿವೆ. ಆದರೆ, ಈವರೆಗೂ ಅವರ ಸುಳಿವು ಸಿಕ್ಕಿಲ್ಲ.
ಸಮುದ್ರದಲ್ಲಿ ಮುಳುಗಿದ ಸತೀಶ ಮೊಗೇರ್, ಗಣೇಶ ಮೊಗೇರ್ ಹಾಗೂ ನಿಶ್ಚಿತ್ ಮೊಗೇರ್ ಎಂಬಾತರಿಗಾಗಿ ಅವರ ಕುಟುಂಬದವರು ಪ್ರಾರ್ಥಿಸುತ್ತಿದ್ದಾರೆ. ಸಚಿವ ಮಂಕಾಳು ವೈದ್ಯ ಸೇರಿ ಅನೇಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಪ್ರಾಣಾಪಾಯದಿಂದ ಪಾರಾದವರು ಆಸ್ಪತ್ರೆ ಸೇರಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
