`ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ, ಹೋರಾಟಗಾರರು ಹಾಗೂ ಇತಿಹಾಸದ ಬಗ್ಗೆ ಪಾಲಕರು ಮಕ್ಕಳಿಗೆ ತಿಳಿಸಬೇಕು. ಶಾಲೆಗಳಲ್ಲಿ ಶಿಕ್ಷಕರು ಸಹ ಮಕ್ಕಳಲ್ಲಿ ದೇಶಪ್ರೇಮದ (Independence day ) ಪಾಠ ಮಾಡಬೇಕು\’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಕರೆ ನೀಡಿದ್ದಾರೆ.
`ಇಂದಿನ ಯುವಜನತೆ ಮತ್ತು ಮಕ್ಕಳಿಗೆ ನಮಗೆ ಸ್ವಾತಂತ್ರ್ಯ ಹೇಗೆ ದೊರೆಯಿತು? ಸ್ವಾತಂತ್ರ್ಯಕ್ಕಾಗಿ ಹೋರಾಟ ಹೇಗೆ ನಡೆಯಿತು? ಎಂದು ಗೊತ್ತಾಗಬೇಕು. ದೇಶಕ್ಕಾಗಿ ಲಕ್ಷಾಂತರ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗ, ಬಲಿದಾನಗಳ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸಬೇಕು. ನಮ್ಮ ಸಂವಿಧಾನ ಹಾಗೂ ಕಾನೂನು ಅರಿವುಗಳ ಬಗ್ಗೆಯೂ ಮಕ್ಕಳಿಗೆ ಮನದಟ್ಟು ಮಾಡಬೇಕು\’ ಎಂದು ಅವರು ಕರೆ ನೀಡಿದರು.
ಎಲ್ಲಡೆ `ಹರ್ ಘರ್ ತಿರಂಗ\’ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಪೋಷಕರು ಮಕ್ಕಳ ಜೊತೆ ಬೆರೆಯಬೇಕು. ಆಗಸ್ಟ್ 15ರಂದು ನಡೆಯುವ ಧ್ವಜಾರೋಹಣಕ್ಕೆ ಮಕ್ಕಳನ್ನು ಕರೆದೊಯ್ದು ಧ್ವಜದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು\’ ಎಂದವರು ಹೇಳಿದರು.