ಹುಬ್ಬಳ್ಳಿ-ಅಂಕೋಲಾ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿ ಯಲ್ಲಾಪುರದ ಚಿನ್ನಾಪುರದ ಬಳಿ ಮನೆಯೊಂದಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಆ ಮನೆ ಭಾಗಶಃ ಮುರಿದು ಬಿದ್ದಿದೆ.
ಮಂಗಳೂರಿನಿoದ ದಾಂಡೇಲಿಗೆ ಕಟ್ಟಿಗೆಯ ತುಂಡುಗಳನ್ನು ಸಾಗಿಸುತ್ತಿದ್ದ ಲಾರಿ ಶುಕ್ರವಾರ ಯಲ್ಲಾಪುರ ಮಾರ್ಗವಾಗಿ ಸಂಚರಿಸುತ್ತಿತ್ತು. ಹೆದ್ದಾರಿ ಬಿಟ್ಟು ಪಾದಚಾರಿ ಮಾರ್ಗದ ಕಡೆ ವಾಲಿದ ಲಾರಿ ಹಾಗೇ ಮುಂದೆ ಬಂದು ಸತೀಶ ನಾಯ್ಕ ಅವರ ಮನೆಗೆ ಗುದ್ದಿತು.
ಈ ವೇಳೆ ಲಾರಿಯೂ ಪಲ್ಟಿಯಾಯಿತು. ಸತೀಶ ನಾಯ್ಕ ಅವರ ಮನೆಯ ಗೋಡೆ ಕುಸಿತು ಬಿದ್ದಿತು. ನಾಯ್ಕರ ಮನೆಯ ಅಡುಗೆ ಮನೆಗೆ ಲಾರಿ ನುಗ್ಗಿದ್ದರಿಂದ ಅಲ್ಲಿನ ವಸ್ತುಗಳೆಲ್ಲವೂ ಚಲ್ಲಾಪಿಲ್ಲಿಯಾಯಿತು.
ಲಾರಿಯಲ್ಲಿದ್ದ ಪೋಲ್ಸಗಳೆಲ್ಲವೂ ನೆಲಕ್ಕೆ ಉರುಳಿತು. ಅಪಘಾತದ ಶಬ್ದಕ್ಕೆ ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದು, ಜೀವಾಪಾಯದಿಂದ ಪಾರಾದರು. ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಅಲ್ಲಿನವರು ದೂರಿದ್ದಾರೆ. ಪೊಲೀಸರು ಸ್ಥಳ ಭೇಟಿ ಮಾಡಿದ್ದಾರೆ.





Discussion about this post