ಕಾಳಿ ನದಿಗೆ ಅಡ್ಡಲಾಗಿದ್ದ ಸೇತುವೆ ಮುರಿದು ಬಿದ್ದ ಕಾರಣ ಆ ಭಾಗದಲ್ಲಿ ಮೀನುಗಾರಿ (Fishing)ಕೆ ನಡೆಸುವುದನ್ನು ನಿಷೇಧಿಸಲಾಗಿದೆ.
ಸೇತುವೆಯ ಭಾಗ ಯಾವುದೇ ಸಮಯದಲ್ಲಿ ಕುಸಿಯುವ ಸಾಧ್ಯತೆ ಇರುವ ಬಗ್ಗೆ ತಜ್ಞರು ವರದಿ ಮಾಡಿದ್ದಾರೆ. ಹೀಗಾಗಿ ಕಾಳಿ ನದಿ ಸೇತುವೆಯನ್ನು ದುರಸ್ಥಿಪಡಿಸುವವರೆಗೆ ಸೇತುವೆ ಹತ್ತಿರ ಅಥವಾ ಸೇತುವೆಯ ಕೆಳ ಪ್ರದೇಶದಲ್ಲಿ ಮೀನುಗಾರಿಕೆ ಮಾಡಬಾರದು ಎಂದು ಸೂಚಿಸಲಾಗಿದೆ. ಮೀನುಗಾರರು ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾಳಿ ನದಿ ಸೇತುವೆಯ ಹತ್ತಿರ ಅಥವಾ ಸೇತುವೆ ಬಳಿ ಸಂಚರಿಸದAತೆ ಮೀನುಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.