ಶಿರಸಿ ಗಣೇಶನಗರ ಬಸ್ ನಿಲ್ದಾಣದ ಬಳಿ ಅಬ್ದುಲ್ ರಜಾಕ್ ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ಪೊಲೀಸರು ವಿಚಾರಿಸಿದಾಗ ಅವರ ಬಳಿ 108 ಗ್ರಾಂ ಗಾಂಜಾ ಸಿಕ್ಕಿದೆ. `ಗಾಂಜಾ ಮಾರಾಟಕ್ಕೆ ಶಿರಸಿಗೆ ಬಂದಿದ್ದೆ’ ಎಂದು ಅಬ್ದುಲ್ ರಜಾಕ್ ಸಹ ಒಪ್ಪಿಕೊಂಡಿದ್ದಾರೆ.
ಹಾವೇರಿಯ ಅಬ್ದುಲ್ ಅಬ್ದುಲ್ ರಜಾಕ್ ಬಾಗ್ಯ ಮಹಾರಾಷ್ಟಕ್ಕೆ ಹೋಗಿದ್ದರು. ಅಲ್ಲಿನ ಸಾಂಗ್ಲಿಯಿAದ ಒಂದಷ್ಟು ಗಾಂಜಾ ಖರೀದಿಸಿ ಅದನ್ನು ಕರ್ನಾಟಕಕ್ಕೆ ಸಾಗಿಸಿದ್ದರು. `ಶಿರಸಿಯಲ್ಲಿ ಗಾಂಜಾ ವ್ಯಾಪಾರ ಜೋರಾಗಿ ನಡೆಯುತ್ತದೆ’ ಎಂಬ ಮಾಹಿತಿ ಆಧರಿಸಿ ಅವರು ಬಸ್ ನಿಲ್ದಾಣಕ್ಕೆ ಬಂದಿದ್ದರು. ಅಗಷ್ಟ್ 3ರಂದು ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದ ಅಬ್ದುಲ್ ರಜಾಕ್ ಅವರನ್ನು ಪೊಲೀಸ್ ಸಿಬ್ಬಂದಿ ರಾಜ್ ಮಹಮದ್ ಹಾಗೂ ರಾಮಯ್ಯ ಪೂಜಾರಿ ತಡೆದರು.
ಶಿರಸಿ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ಸದ್ದಾಂ ಹಸೇನ್, ಹನಮಂತ ಮಕಾಪುರ, ಚನ್ನಬಸಪ್ಪ ಕ್ಯಾರಕಟ್ಟಿ, ಸುನೀಲ ಹಡಲಗಿ, ರಾಜಶೇಖರ ಅಂಗಡಿ ಹಾಗೂ ಸುದರ್ಶನ ನಾಯ್ಕ ಸೇರಿ ಅಬ್ದುಲ್ ರಜಾಕ್ ಅವರ ವಿಚಾರಣೆ ನಡೆಸಿದರು. `ತಾನು ಗಾಂಜಾ ಮಾರಾಟಗಾರ’ ಎಂದು ಅಬ್ದುಲ್ ರಜಾಕ್ ಒಪ್ಪಿಕೊಂಡರು. ತಪಾಸಣೆ ನಡೆಸಿದಾಗ 20 ಖಾಲಿ ಪ್ಯಾಕೇಟು ಹಾಗೂ 108 ಗ್ರಾಂ ಗಾಂಜಾ ಸಿಕ್ಕಿತು.
ಡಿವೈಎಸ್ಪಿ ಗೀತಾ ಪಾಟೀಲ, ಪಿಐ ಶಶಿಕಾಂತ ವರ್ಮ ಅವರಿಗೆ ಈ ಬಗ್ಗೆ ಪಿಎಸ್ಐ ನಾಗಪ್ಪ ಹಾಗೂ ನಾರಾಯಣ ರಾಠೋಡ್ ಮಾಹಿತಿ ನೀಡಿದರು. ಮೇಲಧಿಕಾರಿಗಳ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.
