ಉತ್ತರ ಕನ್ನಡ ( Uttara kannada ) ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಆಶ್ರಯದಲ್ಲಿ ಆಗಸ್ಟ 17ರ ಶನಿವಾರ ಬೆಳಗ್ಗೆ 10 ಗಂಟೆಗೆ `ಕುಂಬ್ರಿ ಮರಾಠಿ ಮೀಸಲಾತಿಗೆ ಎರಡು ದಶಕ\’ ಎಂಬ ವಿಚಾರಣಾ ಸಂಕೀರಣ ನಡೆಯಲಿದೆ.
ಶಿರಸಿಯ ಅಂಬೇಡ್ಕರ ಭವನದಲ್ಲಿ ಈ ಒಂದು ವಿಶ್ಲೇಷಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೀಸಲಾತಿ ಪೂರ್ವ ಸಾಂಘಿಕ ಮತ್ತು ಕಾನೂನು ಹೋರಾಟ, ಮೀಸಲಾತಿ ನಂತರದ ಎರಡು ದಶಕದ ಪ್ರಗತಿ ಮತ್ತು ಸಾಧನೆ ಕುರಿತು ಅಲ್ಲಿ ಮಾಹಿತಿ ದೊರೆಯಲಿದೆ. ಜೊತೆಗೆ `ಸಮಾಜದ ಇಂದಿನ ಸಮಸ್ಯೆ ಮತ್ತು ಮುಂದೆ ಮಾಡಬೇಕಾದ ಕಾರ್ಯ\’ ಎಂಬ ವಿಷಯಗಳ ಕುರಿತು ಅನೇಕರು ಮಾತನಾಡಲಿದ್ದಾರೆ ಎಂದು ಸಂಘಟಕ ರವೀಂದ್ರ ನಾಯ್ಕ ಮಾಹಿತಿ ನೀಡಿದರು.