ಕಿರವತ್ತಿ ಅರಣ್ಯ ಅಂಚಿನಲ್ಲಿನ ಬೊಂಬಡಿಕೊಪ್ಪ ಕಾಡಿಗೆ ಹೋಗಿದ್ದ ರೈತ ಬಾಗು ಯಕ್ಕು ಕಾತ್ರೋಟ್ (28) ಎಂಬಾತರ ಮೇಲೆ ಕರಡಿ ದಾಳಿ (Animal attack) ನಡೆಸಿದೆ.
ಕಾಡಿನ ಅಂಚಿನಲ್ಲಿ ರೈತ ಬಾಗು ಯಕ್ಕು ಕಾತ್ರೋಟ್ ಗದ್ದೆ ಹೊಂದಿದ್ದು, ಶನಿವಾರ ಬೆಳಗ್ಗೆ ಕಾಡು ದಾರಿಯಲ್ಲಿ ಅವರು ಹೊಲದ ಕಡೆ ಹೋಗುತ್ತಿದ್ದರು. ಆಗ ಎದುರಿಗೆ ಸಿಕ್ಕ ಕರಡಿ ಏಕಾಏಕಿ ದಾಳಿ ಮಾಡಿ ಮೈ ಪರಚಿದೆ. ಈ ವೇಳೆ ಓಡಿಹೋಗಿ ಅವರು ಜೀವ ಉಳಿಸಿಕೊಂಡಿದ್ದಾರೆ.
ಯಲ್ಲಾಪುರ ಅರಣ್ಯ ವಲಯಕ್ಕೆ ಸೇರಿದ ಪ್ರದೇಶದಲ್ಲಿ ನಡೆದ ದಾಳಿ ಇದಾಗಿದ್ದು, ಗಾಯಗೊಂಡು ಅಸ್ವಸ್ಥಗೊಂಡ ರೈತ ಬಾಗು ಯಕ್ಕು ಕಾತ್ರೋಟ್\’ರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮ ಪಂಚಾಯತ್ ಸದಸ್ಯ ಹೀರೂ ಶಿಂದೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ನಂತರ ಅರಣ್ಯಾಧಿಕಾರಿಗಳಿಗೆ ಈ ವಿಷಯ ಮುಟ್ಟಿಸಿದರು. ಕಳೆದ ವಾರ ಸಹ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ನಡೆದಿತ್ತು.