ಬಾಳೆಗದ್ದೆಯ ಮಂಜುನಾಥ ಅನಂತ ಸಿದ್ದಿ (30) ಎಂಬಾತರು ಬಾವಿಗೆ ಹಾರಿ ಜೀವ ( Suicide ) ಬಿಟ್ಟಿದ್ದಾರೆ.
ಯಲ್ಲಾಪುರ ತಾಲೂಕಿನ ಕುಂದರಗಿಯ ಬಾಳೆಗದ್ದೆಯಲ್ಲಿ ವಾಸವಾಗಿದ್ದ ಮಂಜುನಾಥ ಸಿದ್ದಿ 2 ವರ್ಷದಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಹೀಗಾಗಿ ಅವರ ತಂದೆ ಅನಂತ ಸಿದ್ದಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ವೈದ್ಯರು ಕೆಲ ಮಾತ್ರೆಗಳನ್ನು ಬರೆದುಕೊಟ್ಟಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಮಂಜುನಾಥ ಸಿದ್ಧಿ ಆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ವೈದ್ಯರ ಸಲಹೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಪರಿಣಾಮ ಆಗಾಗ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು.
ಇದರಿಂದ ಅನಾರೋಗ್ಯ ಸಹ ಅವರನ್ನು ಕಾಡಿತ್ತು. ಹೀಗಿರುವಾಗ ಅಗಸ್ಟ 16ರಂದು ಜಾಜಿಮನೆ ಶಿವರಾಮ ಹೆಗಡೆ ಅವರ ತೋಟಕ್ಕೆ ಹೋದ ಮಂಜುನಾಥ ಹೆಗಡೆ ಅಲ್ಲಿದ್ದ ಬಾವಿಗೆ ಹಾರಿದ್ದಾರೆ. ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.