ಕಾರವಾರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಪ್ರತಿ ವರ್ಷ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ( Happy Birthday ) ಆಚರಿಸಿಕೊಳ್ಳುತ್ತಾರೆ. ಆದರೆ, ಈ ಬಾರಿ ಜನ್ಮದಿನಕ್ಕೆ ವೆಚ್ಚ ಮಾಡಲಿರುವ ಪೂರ್ತಿ ಹಣವನ್ನು ಶಿರೂರು ಸಂತ್ರಸ್ತರ ಸಹಾಯಕ್ಕೆ ನೀಡುವುದಾಗಿ ಅವರು ಘೋಷಿಸಿದ್ದಾರೆ.
ಹುಟ್ಟುಹಬ್ಬಕ್ಕೆ ವೆಚ್ಚ ಮಾಡಬೇಕಿದ್ದ ಹಣವನ್ನು ಉಳಿಸಿ ಅವರು ಉಳುವರೆ ಜನರಿಗೆ ಕಿಟ್\’ಗಳನ್ನು ಹಂಚಿದ್ದಾರೆ. ಆಹಾರ ಸಾಮಗ್ರಿ, ಹಾಸಿಕೆ ಹಾಗೂ ದಿನ ಬಳಿಕೆ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಇದಾಗಿದೆ. ಅಗಸ್ಟ 18ರಂದು ರೂಪಾಲಿ ನಾಯ್ಕ ಅವರ ಜನ್ಮದಿನವಿದ್ದು, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದವರು ಹೇಳಿದ್ದಾರೆ. ಹುಟ್ಟುಹಬ್ಬಕ್ಕೆ ಹೂ – ಉಡುಗರೆ ನೀಡಿ ಶುಭಕೋರುವವರು ಆ ಹಣವನ್ನು ಸಂತ್ರಸ್ತರ ಅನುಕೂಲಕ್ಕೆ ಬಳಸುವಂತೆ ಮನವಿ ಮಾಡಿದ್ದಾರೆ.