ಅಕ್ರಮ ಸರಾಯಿ ಮಾರಾಟಗಾರರ ವಿಚಾರಣೆಗೆ ತೆರಳಿದ್ದ ಅಬಕಾರಿ ಇಲಾಖೆಯ ಸರ್ಕಾರಿ ನೌಕರರ ಮೇಲೆ ( Govt Servant ) ಕಳ್ಳಬಟ್ಟಿ ಸರಾಯಿ ಮಾರಾಟಗಾರ ಅನಂತವಾಡಿ ಕೃಷ್ಣ ಕಿನ್ಯಾ ಗೌಡ (55) ಹಲ್ಲೆ ನಡೆಸಿದ್ದಾರೆ.
ಹೊನ್ನಾವರದ ಅಬಕಾರಿ ನಿರೀಕ್ಷಕ ಶ್ರೀಧರ ಮಡಿವಾಳ ತಮ್ಮ ಕಚೇರಿಯ ಮುಖ್ಯಪೇದೆ ಸುರೇಶ ಹಾರಗೊಪ್ಪ ಹಾಗೂ ಸಿದ್ದಪ್ಪ ಕುರಿಹುಲಿ ಅವರ ಜೊತೆ ಸರ್ಕಾರಿ ವಾಹನದಲ್ಲಿ ಹೊನ್ನಾವರದ ಕೋಟ ಗ್ರಾಮಕ್ಕೆ ತೆರಳಿದ್ದರು. ಅಲ್ಲಿ ಅಕ್ರಮ ಸರಾಯಿ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದ ಗೋಪಾಲ ಕಿನ್ಯಾ ಗೌಡ ಹಾಗೂ ಮಂಜುನಾಥ ಕಿನ್ಯಾ ಗೌಡ ವಿಚಾರಣೆ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಇದಾದ ನಂತರ ಕೃಷ್ಣ ಕನ್ಯಾ ಗೌಡ ಅವರ ವಿಚಾರಣೆಗೆ ಅಬಕಾರಿ ಸಿಬ್ಬಂದಿ ಸುರೇಶ ಹಾರಗೊಪ್ಪ ಹಾಗೂ ಸಿದ್ದಪ್ಪ ಕುರಿಹುಲಿ ಅವರ ಮನೆ ಬಳಿ ತೆರಳಿದ್ದರು.
ಮನೆ ಬಳಿ ಬಂದ ಅಬಕಾರಿ ಸಿಬ್ಬಂದಿ ನೋಡಿ ಕೆಂಡಾಮAಡಲರಾದ ಕೃಷ್ಣ ಕಿನ್ಯಾ ಗೌಡ ಕೆಟ್ಟದಾಗಿ ಬೈದು ಹಲ್ಲೆಗೆ ಯತ್ನಿಸಿದ್ದು, ಇದನ್ನು ತಡೆಯಲು ಯತ್ನಿಸಿದಾಗ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಪೆಟ್ಟುತಿಂದ ಅಬಕಾರಿ ಇಲಾಖೆಯವರು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿ, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.