
ಸರ್ಕಾರಿ ಆಸ್ತಿಗೆ ಹಾನಿ ಮಾಡಿದ ನಾಲ್ವರ ವಿರುದ್ಧ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಹೊನ್ನಾವರದ ಚಂದಾವರ ಸರ್ಕಾರಿ ಉರ್ದು ಶಾಲೆಯೊಳಗೆ ಕೋಟೆಬಾಗಿಲಿನ ಅಖೀಲ ಅಬ್ದುಲ್ ಖಾದರ್, ಇಮಾಮ್ಸಾಬ್ ಘನಿ, ಮಹಮುಬ್ ಸಾಬ್ ಸಂಶಿ ಹಾಗೂ ಅಬ್ದುಲ್ ರಶೀದ್ ಎಂಬಾತರು ಜೆಸಿಬಿ ( JCB ) ನುಗ್ಗಿಸಿದ್ದು, ಇದನ್ನು ಪ್ರಶ್ನಿಸಿದ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ವಾಹೀಬ್\’ಗೆ ನಿಂದನೆಗೆ ಒಳಗಾಗಿದ್ದಾರೆ.
ಅಗಸ್ಟ 14ರಂದು ನಾಲ್ವರು ಆರೋಪಿತರು ಶಾಲಾ ಆವರಣಕ್ಕೆ ಜೆಸಿಬಿ ನುಗ್ಗಿಸಿದ್ದರು. ಯಂತ್ರದ ಮೂಲಕ ಶಾಲಾ ಅಂಗಳದಲ್ಲಿದ್ದ ಮಣ್ಣು ತೆಗೆಯಲು ಶುರು ಮಾಡಿದ್ದರು. ಇದನ್ನು ನೋಡಿದ ಎಸ್ಡಿಎಂಸಿ ಸದಸ್ಯ ಕಲಿಮ್ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ವಾಹೀಬ್\’ಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ಈ ಹಿನ್ನಲೆ ತಕ್ಷಣ ಶಾಲೆಗೆ ಆಗಮಿಸಿದ ಅಬ್ದುಲ್ ವಾಹೀಬ್ ಶಾಲಾ ಆವರಣದಲ್ಲಿ ಜೆಸಿಬಿ ಪ್ರವೇಶಿಸಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೆಸಿಬಿ ಸದ್ದಿನಿಂದ ಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಹೇಳಿದ್ದಾರೆ. ಜೊತೆಗೆ ಶಾಲಾ ಆವರಣದಲ್ಲಿ ಮಣ್ಣು ತೆಗೆಯದಂತೆ ಸೂಚಿಸಿದ್ದಾರೆ.
ಆಗ ಈ ನಾಲ್ವರು ಸೇರಿ ಅಬ್ದುಲ್ ವಾಹೀಬ್\’ಗೆ ನಿಂದಿಸಿ, ಬೈದಿದ್ದಾರೆ. ಇದರಿಂದ ನೊಂದ ಅಬ್ದುಲ್ ವಾಹೀಬ್ ಪೊಲೀಸ್ ದೂರು ನೀಡಿದ್ದಾರೆ.