IAS ಅಧಿಕಾರಿ ಈಶ್ವರಕುಮಾರ ಕಾಂದೋ ಶಿರಸಿಯ ದೋರಣಗೇರಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಜೊತೆ ಕಾಲ ಕಳೆದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಅವರು ಮಕ್ಕಳ ಮುಂದೆ ತಲೆಭಾಗಿ `ನಿಮ್ಮ ಸಮಸ್ಯೆ ಏನು?\’ ಎಂದು ಪ್ರಶ್ನಿಸಿದರು. ಮಕ್ಕಳಿಂದ ಬಂದ ತುಂಟ ಉತ್ತರ ಕೇಳಿ ನಕ್ಕು ಸುಮ್ಮನಾದರು.
ಇದಾದ ನಂತರ ಶಾಲಾ ಅಭಿವೃದ್ಧಿ ಸಮಿತಿಯವರ ಜೊತೆ ಚರ್ಚಿಸಿ ಸಮಸ್ಯೆಗಳ ಕುರಿತು ಪಟ್ಟಿ ಮಾಡಿಕೊಂಡರು. ಗ್ರಾಮದ ಸಮಸ್ಯೆಗಳ ಪರಿಹರಿಸುವ ಬಗ್ಗೆ ಅಧೀನ ಅಧಿಕಾರಿಗಳಿಗೆ ಸೂಚಿಸಿದರು. ಇದರೊಂದಿಗೆ ಸಾಲ್ಕಣಿ ಗ್ರಾಮ ಪಂಚಾಯತ್ನ ಎನ್.ಆರ್.ಎಲ್.ಎಮ್ ನರ್ಸರಿ ವೀಕ್ಷಿಸಿದರು. ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು. ಶಿರಸಿ ತಾಲೂಕಿನ ಸೋಂದಾ, ವಾನಳ್ಳಿ, ಹುಲೇಕಲ್ ಕೊಡನಗದ್ದೆ, ಸಾಲ್ಕಣಿ ಗ್ರಾಮ ಪಂಚಾಯತ್ಗಳಿಗೆ ಭೇಟಿ ನೀಡಿ ಅಲ್ಲಿನ ದಾಖಲಾತಿಗಳ ಪರಿಶೀಲನೆ ಮಾಡಿದರು. ಅಗತ್ಯವಿರುವ ಕಡೆ ಪಶು ಆಸ್ಪತ್ರೆ, ಲೈಬ್ರರಿ, ಕೆರೆ ಕಾಮಗಾರಿಗಳನ್ನು ನಡೆಸುವಂತೆ ಸೂಚಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಹೆಗಡೆ, ತಾ. ಪಂ ವ್ಯವಸ್ಥಾಪಕ ಸುಬ್ರಾಯ್ ಭಟ್ ಅವರ ಜೊತೆಯಿದ್ದರು.