ಶಿರಸಿ ತಾರಗೋಡಿನ ಬಸ್ ನಿಲ್ದಾಣದ ಪಕ್ಕದ ಅಂಗಡಿಯಲ್ಲಿ ಇನ್ಮುಂದೆ ಸರಾಯಿ ಸಿಗಲ್ಲ. ಇಲ್ಲಿ ಅಕ್ರಮವಾಗಿ ಸರಾಯಿ ( Illegal liquor ) ಮಾರಾಟ ಮಾಡುತ್ತಿದ್ದ ಬಗ್ಗೆ ಅರಿತ ಪೊಲೀಸರು ದಾಳಿ ನಡೆಸಿ ಅಂಗಡಿಕಾರನಿಗೆ ಬಿಸಿ ಮುಟ್ಟಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಚೌವತ್ತಿಯ ನರಹರಿ ಸಣ್ಯಾ ನಾಯ್ಕ (38) ಎಂಬಾತ ತಾರಗೋಡು ಬಸ್ ನಿಲ್ದಾಣದ ಅಂಚಿನಲ್ಲಿ ಎಗ್ರೈಸ್ ಅಂಗಡಿ ನಡೆಸುತ್ತಿದ್ದ. ಇದರ ಜೊತೆ ಅಕ್ರಮವಾಗಿ ಸರಾಯಿಯನ್ನು ಆತ ದಾಸ್ತಾನು ಇರಿಸಿಕೊಂಡು ಅದನ್ನು ಮಾರಾಟ ಮಾಡುತ್ತಿದ್ದ. ಕೆಲವರು ಅಲ್ಲಿಯೇ ಆಗಮಿಸಿ ಮದ್ಯ ಸೇವಿಸುತ್ತಿದ್ದು, ಖಚಿತ ಮಾಹಿತಿ ಆಧರಿಸಿ ಅಗಸ್ಟ 17ರ ಬೆಳಗ್ಗೆ ಶಿರಸಿ ಗ್ರಾಮೀಣ ಠಾಣೆ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ ದಾಳಿ ನಡೆಸಿದರು.
ಆಗ ಅಲ್ಲಿ 39ರೂ ಮೌಲ್ಯದ 15 ಸರಾಯಿ ಕೊಟ್ಟೆ ಹಾಗೂ ಒಂದಷ್ಟು ಖಾಲಿ ಕೊಟ್ಟೆಗಳು ಸಿಕ್ಕಿವೆ. ಇದರೊಂದಿಗೆ ಸರಾಯಿ ಕುಡಿಯಲು ಬಳಸುತ್ತಿದ್ದ ಪ್ಲಾಸ್ಟಿಕ್ ಲೋಟಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.