ಕಳೆದ 25 ವರ್ಷಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನುದಾನಿತ ಪಿಂಚಣಿ ವಂಚಿತ ಶಿಕ್ಷಕರು ( Techers ) ಹೋರಾಡುತ್ತಿದ್ದಾರೆ. ಆದರೆ, ಈವರೆಗೂ ಸರ್ಕಾರ ಅವರ ಸಮಸ್ಯೆಯನ್ನು ಆಲಿಸಿಲ್ಲ. ಹೀಗಾಗಿ 30 ವರ್ಷ ಪಾಠ ಮಾಡಿದ ಶಿಕ್ಷಕರು ಸಹ ನಿವೃತ್ತಿ ನಂತರ ಬಿಡಿಗಾಸೂ ಇಲ್ಲದೇ ಬರಿಗೈಯಲ್ಲಿ ಮನೆಗೆ ಮರಳುವುದು ಅನಿವಾರ್ಯವಾಗಿದೆ.
ಅನೇಕ ವರ್ಷಗಳ ಕಾಲ ಅನೇಕ ಶಿಕ್ಷಕರು 3-5 ಸಾವಿರ ರೂ ಮಾಸಿಕ ವೇತನಕ್ಕೆ ಕೆಲಸ ಮಾಡಿದ್ದಾರೆ. ಈ ಬಗ್ಗೆ ಹೋರಾಟ ನಡೆಸಿದ ನಂತರ ಸರ್ಕಾರ ಕನಿಷ್ಟ ಸಂಬಳ ನಿಗದಿ ಮಾಡಿದ್ದು, ಪಿಂಚಣಿಯನ್ನು ಮಾತ್ರ ನೀಡಲು ಒಪ್ಪಿಲ್ಲ. ಹೀಗಾಗಿ ಶನಿವಾರ ಸಹ ಈ ಶಿಕ್ಷಕರು ತಮಗೆ ಈ ಶಿಕ್ಷೆಯಿಂದ ಮುಕ್ತಿಗೊಳಿಸಿ ಎಂದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಅನುದಾನಿತ ಪಿಂಚಣಿ ವಂಚಿತ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಭಟ್, ಜಿಲ್ಲಾ ಉಪಾಧ್ಯಕ್ಷ ಎಂ ರಾಜಶೇಖರ್ ನೌಕರರ ಸಂಘದ ಅಧ್ಯಕ್ಷರಾದ ಜೈ ರಂಗನಾಥ್ ಇತರರು ಜಿಲ್ಲಾಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡರು.