ಯಲ್ಲಾಪುರದ ಗೇರಗದ್ದೆ ದೋಣಗಾರ ಬಳಿ ಶನಿವಾರ ರಾತ್ರಿ ಪ್ರವಾಸಿ ಬಸ್ ಅಪಘಾತವಾಗಿದೆ.
ದೋಣಗಾರ್ ಬಸ್ ನಿಲ್ದಾಣದ ಬಳಿ ಬಸ್ ಪಕ್ಕದ ಗುಡ್ಡಕ್ಕೆ ಗುದ್ದಿದೆ. ಪಿಎಸ್ಆರ್ ಕಂಪನಿಗೆ ಸೇರಿದ ಬಸ್ ಇದಾಗಿದ್ದು, ಚಾಲಕನ ನಿರ್ಲಕ್ಷ್ಯ ಕಾರಣ ಈ ಅಪಘಾತ ನಡೆದಿದೆ. ನಿದ್ರೆಯ ಮಂಪರಿನಲ್ಲಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಸ್ ಧರೆಗೆ ಗುದ್ದಿದ ಪರಿಣಾಮ ಬೆಚ್ಚಿಬಿದ್ದರು. ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ. ಬಸ್ಸಿನಲ್ಲಿದ್ದವರೆಲ್ಲರೂ ಸುರಕ್ಷಿತವಾಗಿದ್ದಾರೆ. ಕಾಲುವೆಯಲ್ಲಿ ಸಿಲುಕಿದ ಬಸ್ಸನ್ನು ಪೊಲೀಸರ ನೆರವು ಪಡೆದು ಮೇಲೆತ್ತಲಾಗಿದ್ದು, ಭಾನುವಾರ ಬಸ್ಸು ಮುಂದಿನ ಪ್ರಯಾಣ ಬೆಳಸಿತು.