ಸದಾ ಭದ್ರತೆಯ ಕರ್ತವ್ಯದಲ್ಲಿರುವ ಪೊಲೀಸರು ( Cops ) ಭಾನುವಾರ ಪೊರಕೆ ಹಿಡಿದು ಸ್ವಚ್ಛತಾ ಕೆಲಸದಲ್ಲಿ ಭಾಗಿಯಾದರು. ಪೊಲೀಸರ ಜೊತೆ ಅವರ ಕುಟುಂಬದವರು ಸಹ ವಿವಿಧ ಕಡೆ ಸ್ವಚ್ಛಗೊಳಿಸಿದರು.
ಕಾರವಾರದ ಮಹಿಳಾ ಪೊಲೀಸ್ ಠಾಣೆ, ನಗರ ಪೊಲೀಸ್ ಠಾಣೆ, ಗ್ರಾಮೀಣ ಪೊಲೀಸ್ ಠಾಣಾ ಆವಾರದಲ್ಲಿ ಪೊಲೀಸರು ( Cops ) ಸ್ವಚ್ಚತಾ ಕಾರ್ಯ ನಡೆಸಿದರು. ಕಚೇರಿ ಹೊರ ಆವರಣದ ಜೊತೆ ಒಳ ಆವರಣವನ್ನು ಸಹ ಸ್ವಚ್ಛಗೊಳಿಸಿದರು. ಕಡತಗಳನ್ನು ಮರು ಜೋಡಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ( Cops ) ಸಹ ಈ ಕಾರ್ಯದಲ್ಲಿ ಭಾಗಿಯಾಗಿದ್ದರು.