ಕಾರವಾರದ ಚಿತ್ತಾಕುಲ ಪಿಎಸ್ಐ ಮಹಾಂತೇಶ್ ವಾಲ್ಮಿಕಿ ಅವರ ವಿರುದ್ಧ ಮಹತ್ವದ ಹೇಳಿಕೆ ನೀಡಿದ್ದ ಮಾಜಾಳಿಯ ವಿನೋದ್ ಗುರವ್ ಇದೀಗ ಉಲ್ಟಾ ಹೊಡೆದಿದ್ದಾರೆ. `ತಾನು ಮದ್ಯದ ನಶೆಯಲ್ಲಿದ್ದಾಗ ಒತ್ತಾಯಪೂರ್ವಕವಾಗಿ ಪಿಎಸ್ಐ ವಿರುದ್ಧ ಹೇಳಿಕೆ ಕೊಡಿಸಲಾಗಿದೆ’ ಎಂದು ವಿನೋದ್ ಗುರವ್ ಎಂಬಾತರು ವಿಡಿಯೋ ಹರಿಬಿಟ್ಟಿದ್ದಾರೆ!
`ಪೊಳೆಂ ಹೋಗಿ ಮರಳುವಾಗ ತನ್ನ ಮೇಲೆ ಪಿಎಸ್ಐ ಮಹಾಂತೇಶ ವಾಲ್ಮಿಕಿ ಅವರು ದೌರ್ಜನ್ಯ ನಡೆಸಿದ್ದರು’ ಎಂದು ವಿನೋದ್ ಗುರವ್ ಮೊದಲು ದೂರಿದ್ದರು. `ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದ್ದರು. `ಒತ್ತಾಯಪೂರ್ವಕವಾಗಿ ತಮ್ಮ ಮೊಬೈಲ್, ಚಾವಿಯನ್ನು ಪೊಲೀಸ್ ಠಾಣೆಗೆ ಒಯ್ದಿದ್ದಾರೆ’ ಎಂದು ದೂರಿದ್ದರು. `ಎರಡು ದಿನ ಗಾಡಿ ಪೊಲೀಸ್ ಠಾಣೆಯಲ್ಲಿತ್ತು. ಗಾಡಿ ಮೇಲೆ ಯಾವ ಪ್ರಕರಣವೂ ಇರಲಿಲ್ಲ. ಆದರೂ, ಗಾಡಿ ಬಿಟ್ಟು ಕೊಟ್ಟಿರಲಿಲ್ಲ. ಇದನ್ನು ಪ್ರಶ್ನಿಸಲು ಹೋಗಿದ್ದ ಸಮೀರ್ ಮೇಲೆ ಪಿಎಸ್ಐ ಹಲ್ಲೆ ನಡೆಸಿದ್ದರು’ ಎಂದು ವಿನೋದ ಗುರವ್ ವಿಡಿಯೋದಲ್ಲಿ ಹೇಳಿದ್ದರು. `ಈ ಪ್ರಕರಣದಿಂದ ಬೇಸತ್ತು ತಾನು ಗೋವಾಗೆ ಹೋಗಿ ಫಿನೈಲ್ ಕುಡಿದಿದ್ದೆ. ವಾಂತಿ ಮಾಡಿದ ನಂತರ ಆರೋಗ್ಯ ಸುಧಾರಿಸಿತು’ ಎಂದು ಹೇಳಿಕೊಂಡಿದ್ದರು. ಆದರೆ, ಇದೀಗ `ಆ ದಿನ ನನ್ನದೇ ತಪ್ಪು’ ಎಂದು ಇದೀಗ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ!
`ನನಗೆ ಸರಾಯಿ ಕುಡಿಸಿ ಮಹಾಂತೇಶ ವಾಲ್ಮೀಕಿ ವಿರುದ್ಧ ಮಾನಾಡುವಂತೆ ಸೂಚನೆ ನೀಡಲಾಯಿತು. ನನಗೆ ಪಿಎಸ್ಐ ಮಹಾಂತೇಶ್ ವಾಲ್ಮೀಕಿ ಯಾವುದೇ ಅನ್ಯಾಯ ಮಾಡಿಲ್ಲ. ತಾನು ಮದ್ಯಪಾನ ಮಾಡಿದ್ದರಿಂದ ನನ್ನ ಕಾರು ಚಾವಿಯನ್ನು ಪೊಲೀಸರು ಪಡೆದಿದ್ದು, ಮರುದಿನ ಚಾವಿ ತೆಗೆದುಕೊಂಡು ಹೋಗುವಂತೆ ಬುದ್ದಿವಾದ ಹೇಳಿದ್ದರು. ಮರುದಿನ ಠಾಣೆಗೆ ಹೋದಾಗ ನನ್ನ ಮೇಲೆ ಹಲ್ಲೆ ನಡೆಸಿಲ್ಲ. ಕನ್ನಡಪರ ಸಂಘಟನೆಯವರು ಬಲವಂತವಾಗಿ ನನಗೆ ಆರೋಪ ಮಾಡಲು ಹೇಳಿದ್ದು, ಆ ವೇಳೆ ನಾನು ಸರಾಯಿ ನಶೆಯಲ್ಲಿದ್ದೆ’ ಎಂದು ವಿನೋದ ಗುರವ್ ಹೇಳಿದ್ದಾರೆ.
ಕಾರವಾರದ ಗಡಿ ಭಾಗದ ಪೊಲೀಸ್ ಠಾಣೆಯಾಗಿರುವ ಚಿತ್ತಾಕುಲಾ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತೇಶ ವಾಲ್ಮೀಕಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಪ್ರಕರಣಗಳನ್ನು ಅವರು ಬೇದಿಸಿದ್ದು, ಅವರ ಮೇಲೆ ಬಂದ ಅಕ್ರಮ ಚಟುªಯ ಆರೋಪ ವರ್ಗಾವಣೆ ಹಿಂದಿನ ಕುತಂತ್ರ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.
ಅನಗತ್ಯವಾಗಿ ಪೊಲೀಸರ ವಿರುದ್ಧ ಅವಹೇಳನ ಮಾಡುವವರ ವಿರುದ್ಧ ತನಿಖೆ ನಡೆಸುವಂತೆಯೂ ಆಗ್ರಹಿಸಿದ್ದಾರೆ. ಈ ಬಗ್ಗೆ ಅವರ ಬೆಂಬಲಿಗರು ತನಿಖಾಧಿಕಾರಿ ಹಾಗೂ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸುವ ಸಾಧ್ಯತೆಗಳಿವೆ.
