`ಯಲ್ಲಾಪುರದ ಆನಗೋಡಿನ ಬಳಿ ವಾಸವಾಗಿದ್ದ ಲಕ್ಷ್ಮೀ ಸಿದ್ದಿ ಸಾವಿಗೆ ಆಹಾರ ಕೊರತೆ ಕಾರಣವಲ್ಲ’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸ್ಪಷ್ಠನೆ ನೀಡಿದ್ದು, ಯಲ್ಲಾಪುರ ತಾಲೂಕಾ ಗ್ಯಾರಂಟಿ ಸಮಿತಿಯೂ ಇದನ್ನು ಪುನರುಚ್ಚರಿಸಿದೆ.
ಗ್ಯಾರಂಟಿ ಸಮಿತಿ ಪದಾಧಿಕಾರಿಗಳು ಶನಿವಾರ ಬೆಲ್ತರಗೆದ್ದೆಗೆ ಭೇಟಿ ನೀಡಿ ಕುಟುಂಬದವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. `ಲಕ್ಷ್ಮೀ ಸಿದ್ದಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿಗೆ ಕೌಟುಂಬಿಕ ಕಲಹ ಕಾರಣ’ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ್ ಶಾನಭಾಗ್ ಹೇಳಿದ್ದಾರೆ.
`ಸಾವನಪ್ಪಿದ ಲಕ್ಷ್ಮೀ ಸಿದ್ದಿ ಅವರ ಮಕ್ಕಳ ಬಳಿ ಆಧಾರ್ ಕಾರ್ಡ ಇದೆ. ಅದೇ ಆಧಾರದಲ್ಲಿ ಅವರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯವನ್ನು ಕಲ್ಪಿಸುವ ಪ್ರಯತ್ನ ನಡೆದಿದೆ’ ಎಂದು ಉಲ್ಲಾಸ್ ಶಾನಭಾಗ್ ಅವರು ಹೇಳಿಕೆ ನೀಡಿದ್ದಾರೆ.
`ಫಲಾನುಭವಿಗಳು ಹೇಳಿಕೊಳ್ಳುವ ಎಲ್ಲಾ ಸಮಸ್ಯೆಗಳಿಗೂ ಗ್ಯಾರಂಟಿ ಸಮಿತಿ ಸ್ಪಂದಿಸಿದೆ. ಇನ್ಮುಂದೆಯೂ ಜನರ ಪರವಾಗಿಯೇ ಸಮಿತಿ ಕೆಲಸ ಮಾಡಲಿದೆ. ಗ್ಯಾರಂಟಿ ವಿಷಯದಲ್ಲಿ ಯಾವುದೇ ಸಮಸ್ಯೆಯಿದ್ದರೂ ಸಮಿತಿಯನ್ನು ಸಂಪರ್ಕಿಸಲು ಅವಕಾಶವಿದೆ’ ಎಂದು ಸಮಿತಿಯ ಸದಸ್ಯರಾದ ನರ್ಮದಾ ನಾಯ್ಕ, ಮುಷರತ್ ಖಾನ್, ಅನಿಲ ಮರಾಠೆ, ಮಹೇಶ ನಾಯ್ಕ, ಅನಂತ ಕೋಟೆಮನೆ ತಿಳಿಸಿದ್ದಾರೆ. .
