ಭಟ್ಕಳದ ಮಾರುಕೇರಿ ಬಳಿಯ ಕೋಟಗೊಂಡದಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಪೊಲೀಸರ ಸುಳಿವು ಸಿಕ್ಕಿದ್ದರಿಂದ ಮತ್ತೊಬ್ಬ ಕಳ್ಳ ತಪ್ಪಿಸಿಕೊಂಡಿದ್ದರಿoದ ಆತನ ಶೋಧ ಮುಂದುವರೆದಿದೆ.
ಎರಡು ತಿಂಗಳ ಹಿಂದೆ ಇಲ್ಲಿನ ನಾಗಪಯ್ಯ ಭಟ್ಟ ಅವರ ಮನೆಗೆ ಟೈಲ್ಸ ಅಳವಡಿಸಲು ಸಾಧೀಕ್ ಶೇಖ್ ಹಾಗೂ ಮೊಹಮ್ಮದ್ ಖಾಜಾ ಬಂದಿದ್ದರು. ಭಟ್ಟರ ಆಸ್ತಿ ನೋಡಿದ ಅವರು ಅದಕ್ಕೆ ಕನ್ನ ಹಾಕಲು ಯೋಜಿಸಿದ್ದರು. ಅದರ ಪ್ರಕಾರ ಭಟ್ಟರು ತಮ್ಮ ಹಳೆಯ ಮನೆಯಲ್ಲಿ ಸಂಗ್ರಹಿಸಿದ್ದ ಅಡಿಕೆ ಚೀಲವನ್ನು ಗಮನಿಸಿದ್ದರು. ಕೆಲ ದಿನದ ನಂತರ ಮೊಹಮ್ಮದ್ ಸಾಧಿಕ್ ಶೇಖ್ (26), ಮೊಹಮ್ಮದ್ ಖಾಜಾ (20) ಮೊಹಮ್ಮದ್ ಇರ್ಶಾದ್ (28), ಮೊಹಮ್ಮದ್ ಮುಸಾದಿಕ್ (36) ಸೇರಿ ಅದನ್ನು ಅಪಹರಿಸಿದರು.
ಅಡಿಕೆ ಕಳ್ಳತನ ನಡೆದ ಬಗ್ಗೆ ನಾಗಪ್ಪಯ್ಯ ಭಟ್ಟ ಅವರು ಪೊಲೀಸ್ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಕಟ್ಟಡ ಕಾರ್ಮಿಕರ ಕಳ್ಳತನದ ವಿಷಯ ಗೊತ್ತಾಗಿದ್ದು, ಅವರನ್ನು ಬಂಧಿಸಿದರು. ಆದರೆ, ಮೊಹಮ್ಮದ್ ನಿಜಾಮ್ ಹೆಬಳೆ ಎಂಬ ಕಳ್ಳ ಪೊಲೀಸರಿಂದ ತಪ್ಪಿಸಿಕೊಂಡರು. ಆತನನ್ನು ಹಿಡಿಯುವುದಾಗಿ ಪೊಲೀಸರು ಹೇಳಿದ್ದಾರೆ.
ಪಿಎಸ್ಐ ಮಂಜುನಾಥ ಎ ಲಿಂಗಾರೆಡ್ಡಿ, ಎಎಸ್ಐ ಗಣಪತಿ ಬೆನಕಟ್ಟಿ ಈ ಕಾರ್ಯಾಚಣೆಯಲ್ಲಿದ್ದರು.
