ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಸಿದ್ದಾಪುರದ ಆಟೋ ಚಾಲಕ ವಿನಾಯಕ ನಾಯ್ಕ ಸಾವನಪ್ಪಿದ್ದು, ಸಾವಿನ ನಂತರ ಅವರ ಕುಟುಂಬದವರು ದೇಹದಾನ ಮಾಡಿದ್ದಾರೆ. ವಿನಾಯಕ ನಾಯ್ಕ ಅವರ ದೇಹದ ಅಂಗಾಗಗಳು 8 ಜನರ ಜೀವ ಉಳಿಸಿದೆ.
ಸಿದ್ದಾಪುರ ಶಿರಳಗಿಯ ವಿನಾಯಕ ವೆಂಕಟೇಶ ನಾಯ್ಕ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದರು. ಅಲ್ಲಿಯೇ ಅವರ ಆಟೊ ಅಪಘಾತಕ್ಕೀಡಾಗಿ ಸಾವನಪ್ಪಿದ್ದರು. ಜುಲೈ 27ರಂದು ಬಿಎಂಟಿಸಿ ಬಸ್ಸು ಆಟೋಗೆ ಗುದ್ದಿದ ಪರಿಣಾಮ ವಿನಾಯಕ ನಾಯ್ಕ ಅವರು ಕೋಮಾಗೆ ಹೋಗಿದ್ದರು. ಆಟೋದಲ್ಲಿದ್ದ ಇನ್ನಿತರ ಪ್ರಯಾಣಿಕರು ಗಾಯಗೊಂಡಿದ್ದರು.
13 ದಿನದ ನಂತರ ವಿನಾಯಕ ನಾಯ್ಕ ಅವರು ಕೊನೆಯುಸಿರೆಳೆದರು. ಈ ಪರಿಸ್ಥಿತಿಯಲ್ಲಿಯೂ ಅವರ ಕುಟುಂಬದವರು ವಿನಾಯಕ ನಾಯ್ಕ ಅವರ ದೇಹದಾನಕ್ಕೆ ನಿರ್ಧರಿಸಿದರು. ಆ ಮೂಲಕ ವಿನಾಯಕ ನಾಯ್ಕ ಅವರು ಸಾವಿನ ನಂತರವೂ 8 ಜನರ ಜೀವ ಕಾಪಾಡಿದರು.
ವಿನಾಯಕ ನಾಯ್ಕ ಅವರ ಶವ ಸಿದ್ದಾಪುರಕ್ಕೆ ಬಂದಿದ್ದು, ಕುಟುಂಬದವರೆಲ್ಲರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು.
