ಕುಮಟಾದ ತದಡಿಗೆ ವ್ಯಾಪಾರಕ್ಕೆ ಬಂದಿದ್ದ ವ್ಯಾಪಾರಿಯೊಬ್ಬರು ಹಠಾತ್ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಉರುಸ್ ಹಬ್ಬದ ಅಂಗವಾಗಿ ಶಾಬೀರ ನಜೀರ ಮಮದಾ ವ್ಯಾಪಾರಕ್ಕೆ ಬಂದಿದ್ದು, ವ್ಯಾಪಾರ ಮುಗಿಸಿ ಮರಳುವಾಗ ಪ್ರಾಣ ಬಿಟ್ಟಿದ್ದಾರೆ.
ಹೊನ್ನಾವರ ವಲ್ಕಿಯ ಶಾಬೀರ ನಜೀರ ಮಮದಾ (41) ಅವರು ಮಕ್ಕಳ ಆಟಿಕೆ ಮಾರಾಟ ಮಾಡುತ್ತಿದ್ದರು. ಅವರು ತದಡಿ ಬಳಿಯ ಮಸೀದಿಗೆ ವ್ಯಾಪಾರಕ್ಕಾಗಿ ಬಂದರು. ವ್ಯಾಪಾರ ಮುಗಿಸಿ ಮನೆಗೆ ಹೋಗುವುದಕ್ಕಾಗಿ ಅವರು ಸೋಮವಾರ ಬಸ್ ನಿಲ್ದಾಣಕ್ಕೆ ಹೊರಟಿದ್ದರು. ಬಸ್ ಕಾಯುವ ವೇಳೆ ಏಕಾಏಕಿ ಕುಸಿದು ಬಿದ್ದರು.
ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಷ್ಟರೊಳಗೆ ಶಾಬೀರ ಸಾವನಪ್ಪಿದ್ದರು. ಹೃದಯಘಾತದಿಂದ ಅವರು ಸಾವನಪ್ಪಿದ ಬಗ್ಗೆ ಹೇಳಲಾಗಿದೆ. ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಶವ ಹಸ್ತಾಂತರಿಸಲಾಯಿತು.
